Download Our App

Follow us

Home » ಭಾರತ » ನಿದ್ರೆಗೆ ಜಾರಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ಅನಧಿಕೃತ ಹೋರ್ಡಿಂಗ್ಸ್ ತೆರವು ಯಾವಾಗ ?

ನಿದ್ರೆಗೆ ಜಾರಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡದ ಅನಧಿಕೃತ ಹೋರ್ಡಿಂಗ್ಸ್ ತೆರವು ಯಾವಾಗ ?

ಬೆಂಗಳೂರಿನ ನಂತರ ಎರಡನೇ ಅತೀ ದೊಡ್ಡ ಮಹಾನಗಾರ ಪಾಲಿಕೆ ಎನಿಸಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೋರ್ಡಿಂಗ್ಸಗಳು ನಾಯಿ ಕೊಡೆಯಂತೆ ಎದ್ದು ನಿಂತಿವೆ. ಲಕ್ಷಾಂತರ ರೂಪಾಯಿ ಲಾಭಗಳಿಸುವ ಜಾಹೀರಾತು ಫಲಕಗಳು ಪಾಲಿಕೆಗೂ ಆದಾಯ ತಂದು ಕೊಡುತ್ತವೆ. 

ಹುಬ್ಬಳ್ಳಿ ಧಾರವಾಡ ಶರವೇಗದಲ್ಲಿ ಬೆಳೆಯುತ್ತಿದ್ದು, ದಿನದಿಂದ ದಿನಕ್ಕೆ ಮಾರುಕಟ್ಟೆ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಅವಳಿ ನಗರದ ರಸ್ತೆಯ ಇಕ್ಕೆಲಗಳಲ್ಲಿ ಬೃಹತ್ ಜಾಹೀರಾತು ಫಲಕ ( ಹೋರ್ಡಿಂಗ್ಸ್ ) ಗಳನ್ನು ಹಾಕಲಾಗಿದೆ. 

ಹೀಗೆ ಹಾಕಿರುವ ಫಲಕಗಳ ಪೈಕಿ ಸಾಕಷ್ಟು ಹೋರ್ಡಿಂಗ್ಸಗಳು ಅನಧಿಕೃತವಾಗಿವೆ ಎನ್ನಲಾಗಿದೆ. ಅಲ್ಲದೆ ಕೆಲವು ಹೋರ್ಡಿಂಗ್ಸಗಳು ಶಿಥಿಲಗೊಂಡಿವೆ ಎನ್ನಲಾಗಿದೆ. 

ಮೊನ್ನೆ ಮುಂಬೈನ ಘಾಟಕೋಪರನಲ್ಲಿ ಬ್ರಹತ್ ಹೋರ್ಡಿಂಗ್ಸ್ ನೆಲಕ್ಕೆ ಉರುಳಿದ ಪರಿಣಾಮ 16 ಜನ ಸಾವನ್ನಪ್ಪಿದ್ದಾರೆ. ಇಂದು ಪುಣೆಯ ಪಿಂಪ್ರಿಯಲ್ಲಿ ಹೋರ್ಡಿಂಗ್ಸ್ ಉರುಳಿ ಬಿದ್ದಿದೆ. 

ಇಷ್ಟೇಲ್ಲ ಅವಘಡ ನಡೆದ ಮೇಲೆ, ಕಣ್ತೆರೆಯಬೇಕಿದ್ದ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು, ಅವಳಿ ನಗರದಲ್ಲಿ ಹಾಕಿರುವ ಹೋರ್ಡಿಂಗ್ಸಗಳನ್ನು ಒಮ್ಮೆ ಪರಿಶೀಲನೆ ನಡೆಸಬೇಕಾಗಿತ್ತು. ಅದನ್ನು ಬಿಟ್ಟು ಪಾಲಿಕೆ ಅಧಿಕಾರಿಗಳು ಬೆಣ್ಣೆ ತಿನ್ನುತ್ತ ಕುಂತಿದ್ದಾರೆ ಅನ್ಸತ್ತೆ. 

ಮಳೆಗಾಲ ಆರಂಭವಾಗಿದ್ದು, ಜೋರಾದ ಗಾಳಿ ಬೀಸುತ್ತಿದೆ. ಅವಳಿ ನಗರಗಳಲ್ಲಿ ಅಳವಡಿಸಲಾಗಿರುವ ಬೃಹತ್ ಹೋರ್ಡಿಂಗ್ಸಗಳ ಗುಣಮಟ್ಟ ಪರಿಶೀಲನೆ ನಡೆಸಬೇಕಿರುವದು ತುರ್ತು ಅಗತ್ಯವಾಗಿದೆ. ಜೊತೆಗೆ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!