ದೇಶದಲ್ಲಿ ನನ್ನನ್ನು ಮುಸ್ಲಿಮ್ ವಿರೋಧಿ ಅಂತ ಬಿಂಬಿಸಲಾಗುತ್ತಿದೆ. ಆದರೆ ನಾನು ರಮಜಾನ್ ಹಬ್ಬದ ವೇಳೆ ಗಾಜಾ ಮೇಲೆ ಇಸ್ರೇಲ್ ನಡೆಸಿದ್ದ ಯುದ್ಧವನ್ನು ನಿಲ್ಲಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಖಾಸಗಿ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಗೆ ವಿಶೇಷ ಪ್ರತಿನಿಧಿ ಕಳಿಸಿ, ರಮಜಾನ್ ವೇಳೆ ಗಾಜಾ ಮೇಲೆ ಯುದ್ಧ ಮುಂದುವರೆಸೋದು ಬೇಡ ಅಂತ ಹೇಳಿದ್ದೆ. ಇದನ್ನು ನಾನು ಪ್ರಚಾರ ಪಡೆಯಲು ಮಾಡಿರಲಿಲ್ಲ ಎಂದು ಮೋದಿ ತಿಳಿಸಿದ್ದಾರೆ.