ದೇಶದ ಪ್ರತಿಷ್ಟಿತ ಖಾಸಗಿ ಹಿಂದಿ ವಾಹಿನಿ ಆಜ್ ತಕ್ ವಾಹಿನಿಯಲ್ಲಿಯೂ ಮತಗಟ್ಟೆ ಸಮೀಕ್ಷೆಯಲ್ಲಿ ಸುಳ್ಳು ಮಾಹಿತಿ ನೀಡಿರುವದು ಬಹಿರಂಗಗೊಂಡಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ( exit poll ) ಕಾಂಗ್ರೇಸ್ಸಿಗೆ, ಸ್ಪರ್ಧಿಸಿದ ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳನ್ನು ತೋರಿಸಲಾಗಿದೆ.
ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಸ್ಥಾನಗಳಿವೆ. ಆ ಪೈಕಿ, ತಮಿಳುನಾಡಿನಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ aajtak ನ ಎಕ್ಸಿಟ್ ಪೋಲ್‌ಗಳು 13-15 ಸ್ಥಾನಗಳನ್ನು ನೀಡುತ್ತಿವೆ.
ಗೋದಿ ಮಾಧ್ಯಮವು ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ವಿಪಕ್ಷ ಆರೋಪಿಸುತ್ತಿದೆ. ಅದಕ್ಕಾಗಿಯೇ ಜನರು ತಮ್ಮ ExitPoll ಅನ್ನು ಇನ್ನು ಮುಂದೆ ನಂಬುವುದಿಲ್ಲ ಎಂದು ಅದು ಹೇಳಿದೆ.
ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಸ್ಥಾನಗಳಿದ್ದು, ಡಿಎಂಕೆ 21 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 2. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ ತಲಾ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
ಯಾವ ಆಧಾರದ ಮೇಲೆ ಅಂಕಿ ಸಂಖ್ಯೆ ನೀಡಲಾಗಿದೆಯೋ ಎಂದು ವಿಪಕ್ಷಗಳು ಆರೋಪಿಸಿವೆ. ಜವಾಬ್ದಾರಿಯುತವಾಗಿ ಸಮೀಕ್ಷೆ ಮಾಡಬೇಕಾದ ರಾಷ್ಟ್ರೀಯ ಮಾಧ್ಯಮ, ಸುಳ್ಳು ಮಾಹಿತಿ ನೀಡಿದೆ.