ಹೋಳಿ ಹುಣ್ಣಿಮೆ ಬಂತೆಂದರೆ ಸಾಕು ನವಲಗುಂದ ಪಟ್ಟಣ ತುಂಬಿ ತುಳುಕುತ್ತದೆ. ಹೋಳಿ ಹಬ್ಬಕ್ಕೆ ಪ್ರತಿಷ್ಟಾಪನೆಗೊಳ್ಳುವ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತದೆ.
ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು ರಾಮಲಿಂಗ ಕಾಮಣ್ಣನಿಗೆ ಬೆಳ್ಳಿ ಬಂಗಾರ, ಮತ್ತು ಸಾವಿರಾರು ರೂಪಾಯಿ ಕಾಣಿಕೆ ಹಾಕಿ ಹೋಗುತ್ತಾರೆ.
ಪ್ರತಿ ವರ್ಷ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಈ ವರ್ಷ 5 ಲಕ್ಷ ಜನ ಭಕ್ತರು ದರ್ಶನ ಪಡೆದಿದ್ದಾರೆ.
ರಾಮಲಿಂಗ ಕಾಮಣ್ಣ ಪವಾಡ ಕಾಮಣ್ಣ ಎಂದು ಹೆಸರಾಗಿದೆ. ಇಲ್ಲಿ ಬಂದು ಹರಕೆ ಹೊತ್ತರೆ, ಒಂದೇ ವರ್ಷದಲ್ಲಿ ಹರಕೆ ಯಶಸ್ವಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಪ್ರತಿ ವರ್ಷ ಎರಡು ಕೋಟಿಯಷ್ಟು ದೇಣಿಗೆ ಸಂಗ್ರಹವಾಗುತ್ತದೆ. ಅಲ್ಲದೆ ಹರಕೆ ಹೊತ್ತವರು ಬಂಗಾರ, ಬೆಳ್ಳಿಯ ಆಭರಣಗಳನ್ನು ರಾಮಲಿಂಗ ಕಾಮಣ್ಣನಿಗೆ ಸಮರ್ಪಿಸುತ್ತಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಆಡಳಿತ ಮಂಡಳಿಯ ಟಿಪ್ಪು ನದಾಫ ಎಂಬುವವರು, ಸಂಗ್ರಹವಾದ ದೇಣಿಗೆ ಹಣದ ಪೈಕಿ, 75 ಲಕ್ಷ 60 ಸಾವಿರದಾ 900 ರೂಪಾಯಿ ಹಣವನ್ನು ಸ್ವಂತಕ್ಕೆ ಉಪಯೋಗಿಸಿ ಮರಳು ( ಉಸುಕು ) ಪಾಯಿಂಟ್ ಮಾಡಿ, ನಂತರ ಈ ಅವ್ಯವಹಾರ ಬೆಳಕಿಗೆ ಬಂದ ಮೇಲೆ ಹಣವನ್ನು ಟ್ರಸ್ಟಿನ ಖಾತೆಗೆ ಜಮಾ ಮಾಡಿದ್ದಾರೆ.
ಕೇವಲ ಟಿಪ್ಪು ಅಷ್ಟೇ ಅಲ್ಲ, ಇನ್ನು ಕೆಲವರು ರಾಮಲಿಂಗ ಕಾಮಣ್ಣನ ದೇಣಿಗೆ ಹಣವನ್ನು ವೈಯುಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದು, ರಾಮಲಿಂಗ ದೇವಸ್ಥಾನವನ್ನು ಸರ್ಕಾರ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕೆಂದು, ನವಲಗುಂದದ ಭಕ್ತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಾಜಿ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಈರಣ್ಣ ಚವಡಿ,ಮಾಹಾಂತೇಶ್ ಭೋವಿ, ಮಂಜು ಜಾಧವ, ಚೆನ್ನಪ್ಪ, ರವಿ ಬೆಂಡಿಗೇರಿ, ಮುನ್ನಾ ರಾಮದುರ್ಗ, ಆನಂದ ಜಾಬೀನ್ ಸೇರಿದಂತೆ ಹಲವರು, ರಾಮಲಿಂಗ ಕಾಮಣ್ಣನ ದೇಣಿಗೆ ಹಣ ದುರುಪಯೋಗ ಹಿನ್ನೇಲೆಯಲ್ಲಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.