ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ ಶಾಸಕ ಅರವಿಂದ ಬೆಲ್ಲದರ ಹುಬ್ಬಳ್ಳಿ ಮನೆಯಲ್ಲಿ ಪಂಚಮಸಾಲಿ ಶ್ರೀಗಳು ಸಭೆ ನಡೆಸಿದ್ರು.
ಬೆಂಗಳೂರಿನಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನದಲ್ಲಿ ಕೂಡಲಸಂಗಮದ ಪಂಚಮಸಾಲಿ ಶ್ರೀಗಳ ಹೋರಾಟಕ್ಕೆ ಶಕ್ತಿ ತುಂಬಲು ಸಮುದಾಯದ ಎಲ್ಲ ಶಾಸಕರು ದ್ವನಿ ಎತ್ತಲಿದ್ದೇವೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.
ಅನೇಕ ವರ್ಷಗಳಿಂದ ಸಮಾಜದ ಮಕ್ಕಳಿಗೆ ಮೀಸಲಾತಿ ಕೊಡಿಸುವ ಉದ್ದೇಶದಿಂದ ಹೋರಾಟ ನಡೆದಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲಾಗುವದು ಎಂದು ಅವರು ತಿಳಿಸಿದರು.