ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡದಲ್ಲಿ ಶುದ್ಧ ಗಾಳಿ ಬೀಸುತಿದೆ. ಧಾರವಾಡದ ಗಾಳಿಯ ಗುಣಮಟ್ಟ ಉತ್ತಮವಾಗಿದೆ
PM2.5 ಗಾಳಿಯ ಮಾಪನ ಮಾಡಲಾಗಿದ್ದು, ವಾಯು ಗುಣಮಟ್ಟದ ಮುನ್ಸೂಚನೆ ನೀಡಿದೆ. 20 µg/m3 ಆಗಿದೆ, ಇದನ್ನು ಶುದ್ಧ ಗಾಳಿ ಎಂದು ಪರಿಗಣಿಸಲಾಗುತ್ತದೆ.
ಕರ್ನಾಟಕದಲ್ಲಿ 53,054,249 ಜನರು WHO ನ ಶುದ್ಧ ಗಾಳಿ ಮಾರ್ಗಸೂಚಿಗಳನ್ನು ಪೂರೈಸದ ವಿಷಕಾರಿ ಗಾಳಿಯನ್ನು ಉಸಿರಾಡುತ್ತಿದ್ದಾರೆ.
ಧಾರವಾಡವು ಕರ್ನಾಟಕದಲ್ಲಿ ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ಜಿಲ್ಲೆಯಲ್ಲವಾದರು, ಸ್ವಲ್ಪ ಮಟ್ಟಿಗೆ ವಾಯು ಮಾಲಿನ್ಯವಾಗಲು ಪ್ರಾರಂಭಿಸಿದೆ ಎಂದು ಮಾಲಿನ್ಯ ನಿಯಂತ್ರಣ ಇಲಾಖೆ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ಕಲಬುರಗಿಯಲ್ಲಿ ಅತೀ ಹೆಚ್ಚು ವಾಯು ಮಾಲಿನ್ಯವಾಗುತ್ತಿದೆ. ಅದಕ್ಕೆ ಹೋಲಿಸಿದರೆ ಧಾರವಾಡದಲ್ಲಿ ಗಾಳಿಯ ಗುಣಮಟ್ಟ ಉತ್ತಮ ಎಂದು ಹೇಳಲಾಗಿದೆ. ಧಾರವಾಡದಲ್ಲಿನ ಗಾಳಿಯ ಗುಣಮಟ್ಟವು ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ವರದಿ ತಿಳಿಸಿದೆ.