ಪ್ರಸಿದ್ಧ ಕೇದಾರನಾಥ ದೇವಸ್ಥಾನದಲ್ಲಿದ್ದ 228 ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿರುವ ಶ್ರೀಗಳು, ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ನಾಪತ್ತೆಯಾಗಿದ್ದರು ತನಿಖೆ ಯಾಕೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಮತ್ತೊಂದು ಕೇದಾರನಾಥ ದೇವಸ್ಥಾನ ಕಟ್ಟಲು ಕೆಲವರು ಹವಣಿಸುತ್ತಿದ್ದಾರೆ. ದೆಹಲಿಯಲ್ಲಿ ಕೇದಾರನಾಥ ದೇವಸ್ಥಾನ ಕಟ್ಟಿ, ಅಲ್ಲಿಯೂ ಕೊಳ್ಳೆ ಹೊಡೆಯುವ ಯತ್ನ ನಡೆದಿದೆಯಾ ಎಂದು ಪ್ರಶ್ನಿಸಿದರು.