ವಿಧ್ಯಾನಗರಿ ಧಾರವಾಡದಲ್ಲಿ ಸರ್ಕಾರದ ಅದ್ಭುತ ಗ್ರಂಥಾಲಯ, ಓದುಗರನ್ನು ಕೈಬೀಸಿ ಕರೆಯುತ್ತಿದೆ.
ಧಾರವಾಡದ ಡಿ ಸಿ ಕಚೇರಿ ರಸ್ತೆಯಲ್ಲಿರುವ ಸೆಂಟ್ರಲ್ ಲೈಬ್ರರಿಯಲ್ಲಿ ದಿನಂಪ್ರತಿ ಒಂದು ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಓದಲು ಬರುತ್ತಿದ್ದಾರೆ.
ವಿಧ್ಯಾಕಾಶಿ ಎಂದು ಹೆಸರುವಾಸಿಯಾಗಿರುವ ಧಾರವಾಡಕ್ಕೆ ವಿಧ್ಯಾಭ್ಯಾಸಕ್ಕೆಂದು ಲಕ್ಷ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಾಗೆ ಬಂದವರಿಗೆ ಸುಸಜ್ಜಿತ ಗ್ರಂಥಾಲಯ ದಿನದ 12 ಘಂಟೆ ತೆರೆದಿರುತ್ತದೆ.
ಕೇಂದ್ರ ಗ್ರಂಥಾಲಯ ಸೇರಿದಂತೆ ಧಾರವಾಡದಲ್ಲಿ ಒಟ್ಟು 20 ಗ್ರಂಥಾಲಯಗಳಿವೆ. ಸಪ್ತಾಪುರ, ನಾರಾಯಣಪುರ, ಕಲ್ಯಾಣನಗರ, ಮುರುಘಾಮಠ ಹೀಗೆ ಎಲ್ಲೆಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದೆಯೋ ಅಲ್ಲಲ್ಲಿ ಗ್ರಂಥಾಲಯ ಇಲಾಖೆ ಶಾಖೆಗಳನ್ನು ತೆರೆದಿದೆ. ಅಲ್ಲದೆ ಹುಬ್ಬಳ್ಳಿಯಲ್ಲಿ 24 ಗ್ರಂಥಾಲಯ ಶಾಖೆಗಳನ್ನು ತೆರೆಯಲಾಗಿದೆ.
ಕೇಂದ್ರ ಗ್ರಂಥಾಲಯದಲ್ಲಿ 1 ಲಕ್ಷ 27 ಸಾವಿರದಾ 25 ಪುಸ್ತಕಗಳಿವೆ. ಕಥೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಇಲ್ಲಿ ಲಭ್ಯವಿವೆ. ಏಕಕಾಲಕ್ಕೆ ಒಂದು ಸಾವಿರ ಜನ ಕುಳಿತುಕೊಳ್ಳುವಷ್ಟು ಆಸನದ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಸೇರಿ ಗ್ರಂಥಾಲಯಗಳಲ್ಲಿ ಒಟ್ಟು 11 ಲಕ್ಷ ಪುಸ್ತಕಗಳಿವೆ.
online ತರಗತಿಯ ಸೌಲಭ್ಯವನ್ನು ಇಲ್ಲಿ ಮಾಡಲಾಗಿದೆ. ಆನ್ ಲೈನ್ ತರಗತಿಗಳಿಗೆ ಕುಳಿತುಕೊಳ್ಳಲು ಒಟ್ಟು 15 ಕಂಪ್ಯೂಟರ್ ಗಳನ್ನು ಇಲ್ಲಿ ಇಡಲಾಗಿದೆ.
ಕುಡಿಯುವ ನೀರು, ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರಿಗೆ ಪ್ರತ್ತೈಕ ವ್ಯವಸ್ಥೆ ಇಲ್ಲಿದೆ. ಕೇಂದ್ರ ಗ್ರಂಥಾಲಯ ಬೆಳಿಗ್ಗೆ 8 ಘಂಟೆಯಿಂದ ರಾತ್ರಿ 8 ಘಂಟೆಯವರೆಗೆ ತೆರೆದಿರುತ್ತದೆ.
200 ರೂಪಾಯಿ ಠೇವಣಿ ಇಟ್ಟು ಸದಸ್ಯರಾಗುವವರಿಗೆ 15 ದಿನಗಳ ಕಾಲ ಅಭ್ಯಾಸ ಮಾಡಲು ಪುಸ್ತಕಗಳನ್ನು ಎರವಲು ಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಹ ಪ್ರತ್ತೈಕವಾಗಿ ಆಸನದ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು, ಪದವಿ ತರಗತಿ ವಿಧ್ಯಾರ್ಥಿಗಳಿಂದ ಈ ಗ್ರಂಥಾಲಯ ತುಂಬಿರುತ್ತದೆ.