ವಾಲ್ಮೀಕಿ ಹಗರಣ ರಾಜ್ಯ ವ್ಯಾಪಿ ಸುದ್ದಿ ಮಾಡಿದೆ. ED, CBI ಹಗರಣದ ಬೆನ್ನು ಬಿದ್ದಿದೆ. ಸರ್ಕಾರದ ಹಣ ದುರ್ಬಳಕೆ ಕುರಿತು ವಿಪಕ್ಷಗಳು ಆಡಳಿತಾರೋಡ ಸರ್ಕಾರದ ಮೇಲೆ ಮುಗಿ ಬಿದ್ದಿವೆ. ಇಂತವೆಲ್ಲ ಇರಬೇಕಾದರೆ ಧಾರವಾಡದ ಉಪ ವಿಭಾಗಾಧಿಕಾರಿ ಕಚೇರಿಯ ಸರ್ಕಾರಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕ ಬದಲಾಗಿ ಖಾಸಗಿ ಬ್ಯಾಂಕನಲ್ಲಿ ಇಡಲಾಗಿದೆ. ಹಣವೇನು ಸಧ್ಯ ಸುರಕ್ಷಿತವಿದೆ. ಹೆಚ್ಚು ಕಡಿಮೆ ಆದರೆ ಯಾರೋ ಹೊಣೆ ಅನ್ನೋದು ಈಗಿರುವ ಪ್ರಶ್ನೆ.
ಭೂ ಸ್ವಾಧೀನಕ್ಕಾಗಿ, ರೈತರಿಗೆ ಪರಿಹಾರ ಕೊಡಲು ಸರ್ಕಾರ ಆಯಾ ಉಪ ವಿಭಾಗಾಧಿಕಾರಿಗಳ ಖಾತೆಗೆ ಹಣ ಜಮಾ ಮಾಡುತ್ತದೆ. ಸರ್ಕಾರದ ಮೂಲಗಳ ಪ್ರಕಾರ ಭೂ ಸ್ವಾಧೀನಕ್ಕೆ ಪರಿಹಾರದ ರೂಪದಲ್ಲಿ ಕೊಡಬೇಕಾದ ಹಣ ರಾಷ್ಟ್ರೀಕೃತ ಬ್ಯಾಂಕನಲ್ಲಿ ಖಾತೆ ತೆಗೆದು ಇಡಬೇಕಂತೆ. ಆದರೆ ಕರ್ನಾಟಕ ಫೈಲ್ಸ್ ಗೆ ಲಭ್ಯವಾದ ಮಾಹಿತಿ ಪ್ರಕಾರ ಅಂದಾಜು 50 ಲಕ್ಷ ಹಣ ಸಧ್ಯ ಖಾಸಗಿ ಬ್ಯಾಂಕ ಆದ FEDERAL ಬ್ಯಾಂಕ ಖಾತೆಯಲ್ಲಿ ಇಡಲಾಗಿದೆ.
ಈ ಮುಂಚೆ ಭೂ ಸ್ವಾಧೀನಕ್ಕೆಂದು ಬಂದ ಹಣವನ್ನು KOTAK ಬ್ಯಾಂಕನಲ್ಲಿ ಠೇವಣಿ ಮಾಡಲಾಗಿತ್ತು. ಅಲ್ಲಿಂದಲೇ ಎಲ್ಲಾ ವ್ಯವಹಾರಗಳು ನಡೆಯುತ್ತಿದ್ದವು. ಖಾಸಗಿ ಬ್ಯಾಂಕನಲ್ಲಿ ಸರ್ಕಾರಿ ಹಣ ರೇವಣಿ ಮಾಡಿದರೆ, ಆ ಬ್ಯಾಂಕನವರು, ಕಚೇರಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು CSR fund ಕೊಡ್ತಾರೆ ಅನ್ನೋ ಕಾರಣಕ್ಕೆ ಖಾಸಗಿ ಬ್ಯಾಂಕನಲ್ಲಿ ಖಾತೆ ತೆರೆಯಲಾಗಿದೆಯಂತೆ.
ಒಂದು ವೇಳೆ ಖಾಸಗಿ ಬ್ಯಾಂಕಗಳು ಯಾವದೋ ಕಾರಣಕ್ಕೆ ದಿವಾಳಿ ಎದ್ದರೆ ಅದಕ್ಕೆ ಯಾರು ಹೊಣೆ ಅನ್ನೋದು ಈಗ ಮುಂದಿರುವ ಪ್ರಶ್ನೆ.