ನವಲಗುಂದ ಗುಡ್ಡದ ಮಣ್ಣಿನ ಜಟಾಪಟಿ ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದು ನಿಂತಿದೆಯಾ? ಅಂತದೊಂದು ಬೆಳವಣಿಗೆ ಇಂದು ಬೆಳಿಗ್ಗೆಯಿಂದ ನಡೆದಿದೆ ಎನ್ನಲಾಗಿದೆ.
ಬಂಡಿವಾಡದ ನ್ಯಾಯವಾದಿ ಕಿರಣ ರೆಡ್ಡಿಯವರು ನವಲಗುಂದ ತಾಲೂಕಿನಲ್ಲಿ ನಡೆದಿರುವ ಕಾಮಗಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಒಂದು ವ್ಯಂಗ್ಯ ಚಿತ್ರಹಾಕಿದ್ದು, ಕಿರಣ ರೆಡ್ಡಿಯವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ.
ಅಂದ ಹಾಗೆ ಭದ್ರಾಪುರ ಬಸಾಪುರ ಮಧ್ಯೆ ಹೊಲದ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದಲ್ಲದೆ, ಕೇವಲ ಒಂದುವರೆ ಕಿಲೋಮೀಟರ ಕಚ್ಚಾ ರಸ್ತೆ ನಿರ್ಮಾಣಕ್ಕೆ 50 ಲಕ್ಷ ವೆಚ್ಚ ಮಾಡಿದ್ದಾರೆ ಎಂದು ಕಿರಣ ರೆಡ್ಡಿ ಆರೋಪಿಸಿದ್ದು, ಬೆದರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಕಿರಣ ರೆಡ್ಡಿ ಹಾಗೂ ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಬೆಂಬಲಿಗರ ಮಧ್ಯೆ ಅಶ್ಲೀಲ ಪದಗಳ ಬಳಕೆಯಾಗುತ್ತಿದೆ ಎನ್ನಲಾಗಿದೆ.
ಭದ್ರಾಪುರ ಹಾಗೂ ಬಸಾಪುರ ನಡುವೆ ಒಂದುವರೆ ಕಿಲೋಮೀಟರನಷ್ಟು ಹೊಲದ ರಸ್ತೆ ನಿರ್ಮಾಣಕ್ಕೆ 10 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, 10 ಲಕ್ಷದ ಪೈಕಿ 7 ಲಕ್ಷ 57 ಸಾವಿರದಾ 700 ರೂಪಾಯಿ ಬಿಡುಗಡೆಯಾಗಿದ್ದರ ಬಗ್ಗೆ ಧಾಖಲೆ ಹೊರ ಬಿದ್ದಿದೆ.
ಇದೇ ಕಾರಣಕ್ಕೆ ಈಗ ಶಾಸಕರ ಬೆಂಬಲಿಗರು ಹಾಗೂ ಕಿರಣ ರೆಡ್ಡಿ ಎಂಬುವವರ ನಡುವೆ ಜಟಾಪಟಿ ನಡೆದಿದ್ದು, ಇದು ಚಿತ್ರನಟ ದರ್ಶನ ಅವರ ರೀತಿಯಲ್ಲಿ ಮತ್ತೊಂದು ರೇಣುಕಾಸ್ವಾಮಿ ಪ್ರಕರಣ ಆಗದಿರಲಿ ಅನ್ನೋದು ಎಲ್ಲರ ಆಶಯ.