ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪರಿಚ್ಛೇದ 28(1) (ಎಫ್) ರ ಅನ್ವಯ ಮತ್ತು ಮಾನ್ಯ ಕುಲಪತಿಗಳ ಆದೇಶದಂತೆ, ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಸಂಯೋಜಿತ ಮಹಾವಿದ್ಯಾಲಯಗಳ ನಾಲ್ವರು ಪಾಚಾರ್ಯರನ್ನು ಸಿಂಡಿಕೇಟ್ ಸಭೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿಧ್ಯಾಲಯದ ಪ್ರಾಂಶುಪಾಲ ಡಾ. ಎಂ. ಡಿ. ಒಕ್ಕುಂದ, ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ, ಎಂ ಬಿ ಬಾಗಡಿ ಸೇರಿದಂತೆ ಡಾ, ಎಲ್ ಡಿ ಹೊರಕೇರಿ ಹಾಗೂ ಡಾ, ಶ್ರೀಮತಿ, ಎ ಎಂ ನಾಯಕ ಅವರನ್ನು ನೇಮಕ ಮಾಡಲಾಗಿದೆ.