ಕಾಂಗ್ರೇಸ್ ಟಿಕೆಟ್ ವಂಚಿತ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಕಾಂಗ್ರೇಸ್ ಗೆ ಬಂಡಾಯದ ಬಿಸಿ ತಟ್ಟಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಕಾಂಗ್ರೇಸ್ ಅಭ್ಯರ್ಥಿಯಾಗಿರುವ ಯಾಸಿರ್ ಖಾನ್ ಪಠಾಣ ಮೇಲೆ ಮುಗಿಬಿದ್ದಿರುವ ಖಾದ್ರಿ, ಪಠಾಣ ಮೇಲೆ ವಾಕ್ಸಮರ ಮುಂದುವರಿದಿದ್ದಾರೆ.
ನೀರಲ್ಲಿ ಇಳಿದಿದ್ದೇನೆ, ತಂಡಕ್ಕೆ ಹೆದರಲ್ಲ, ನಾನು ಶಿಗ್ಗಾವ ಕ್ಷೇತ್ರದ ಆಸ್ತಿ ಎಂದಿರುವ ಖಾದ್ರಿ ಮಧ್ಯಾಹ್ನ 3 ಗಂಟೆಯ ಒಳಗೆ ನಿರ್ಧಾರ ತೆಗೆದುಕೊಳ್ಳುವದಾಗಿ ಹೇಳಿದ್ದಾರೆ.
ಮತ್ತೊಂದೆಡೆ ಕಾಂಗ್ರೇಸ್ ನಾಯಕರು ಖಾದ್ರಿಯವರನ್ನು ಸಮಾಧಾನ ಪಡಿಸುವ ಯತ್ನ ನಡೆಸುತ್ತಿದ್ದಾರೆ, ಕಾಂಗ್ರೇಸ್ ನಾಯಕರ ದೂರವಾಣಿ ಕರೆ ಸ್ವೀಕರಿಸಿದರೆ ತಲೆನೋವಾಗಿ ಪರಿಣಮಿಸಿದೆ. ಖಾದ್ರಿಯವರ ಬೆಂಬಲಿಗರು ಪಕ್ಷೇತರ ಕಣಕ್ಕಿಳಿಯಬೇಕು ಎಂದು ಹೊಂದಿರುತ್ತಾರೆ, ಮಧ್ಯಾಹ್ನ 3 ರ ವರೆಗೆ ಏನಾಗುತ್ತೋ ಕಾದು ನೋಡಬೇಕಾಗಿದೆ.
