ಶಿಗ್ಗಾವಿ ಉಪಚುನಾವಣೆಯ ಕಣ ರಂಗೇರಿದೆ. ನಿನ್ನೇ ನಾಮಪತ್ರ ಸಲ್ಲಿಕೆಯಾದ ಬಳಿಕ ಶಿಗ್ಗಾವಿ ಕ್ಷೇತ್ರದಲ್ಲಿ ಉಳಿದಿರುವ ಸಚಿವ ಸತೀಶ ಜಾರಕಿಹೊಳಿ, ಬೂತ್ ಮಟ್ಟದ ಸಭೆ ನಡೆಸಿ, ರಣತಂತ್ರ ಹೆಣೆಯುತ್ತಿದ್ದಾರೆ.
ಕಳೆದ 2 ದಿನಗಳಿಂದ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಡುಬಿಟ್ಟಿರೋ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ, ಖಾಸಗಿ ಹೊಟೇಲ್ ನಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಪ್ರತಿ ಮತಗಟ್ಟೆಯ ಮತದಾರರ ಪಟ್ಟಿ ಪಡೆಯುತ್ತಿರೋ ಸತೀಶ್ ಜಾರಕಿಹೊಳಿ, ಅಹಿಂದ ಮತಗಳು ಚದುರಿ ಹೋಗದಂತೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.
ಬಸವರಾಜ ಬೊಮ್ಮಾಯಿ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ಕಾರ್ಯಕರ್ತರಿಗೆ ಟಾಸ್ಕ್ ನೀಡುತ್ತಿದ್ದಾರೆ