ಶಿಗ್ಗಾವ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಯಾಸಿರ್ ಖಾನ್ ಪಠಾಣ ಮೇಲೆ ಯಾವದೇ ರೌಡಿ ಶೀಟ್ ಇಲ್ಲ ಎಂದು ಹಾವೇರಿ ಜಿಲ್ಲಾ ಪೂಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತೀವ್ರ ಕುತೂಹಲ ಮೂಡಿಸಿರುವ ಶಿಗ್ಗಾವಿ ಸವಣೂರು ಉಪ ಚುನಾವಣೆಗೆ ಬುಧವಾರ ಮತದಾನ ನಡೆಯಲಿದ್ದು, ಮತದಾನಕ್ಕೆ 24 ಘಂಟೆ ಬಾಕಿ ಉಳಿಯುತ್ತಿದ್ದಂತೆ ಯಾಸಿರ್ ಖಾನ್ ಪಠಾಣ ಮೇಲೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ರೌಡಿ ಶೀಟ್ ಇರುವ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು.
ಇದೀಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಚೇರಿಯ ಧಾಖಲಾತಿ ಪರಿಶೀಲಿಸಲಾಗಿ ಯಾಸಿರ್ ಖಾನ್ ಪಠಾಣ ಮೇಲೆ ಯಾವದೇ ರೌಡಿ ಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.