ಇಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿಯ ಮಹತ್ವದ ಕೋರ್ ಕಮಿಟಿ ಸಭೆ ನಡೆಯಿತು.
ಕಳೆದೆರಡು ತಿಂಗಳಿನಿಂದ ಬಿಜೆಪಿ ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದ ಆಂತರಿಕ ಸಂಘರ್ಷ, ಮಹತ್ವದ ತೀರ್ಮಾನದ ಬಳಿಕ ಕೊನೆಯಾಗಿದೆ.
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ ಅಗರವಾಲ ಸಮ್ಮುಖದಲ್ಲಿ ನಡೆದ ಕೋರ್ ಕಮಿಟಿಯಲ್ಲಿ, ಪಕ್ಷ ಸಂಘಟನೆ, ಶಾಸಕರ ಶಿಸ್ತು ಉಲ್ಲಂಘನೆ ಸೇರಿದಂತೆ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ದ್ವನಿ ಎತ್ತಬೇಕಾದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಇತ್ತೀಚಿಗೆ ಪಕ್ಷದ ಒಳಗೆ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ಚರ್ಚೆಗೆ ಬಂದಾಗ, ಪಕ್ಷದ ಬಗ್ಗೆ, ಪಕ್ಷ ವಿರೋಧಿ ಹೇಳಿಕೆ ಹಾಗೂ ಪಕ್ಷದ ನಾಯಕತ್ವದ ಬಗ್ಗೆ ಅಪಸ್ವರ ಹೊರಹಾಕುತ್ತಿರುವ ಶಾಸಕರಾದ ಎಸ್ ಟಿ ಸೋಮಶೇಖರ ಹಾಗೂ ಹೆಬ್ಬಾರರನ್ನು ಅಮಾನತು ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೋರ್ ಕಮಿಟಿ ಸಭೆಯಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ವಿರೋದ ಪಕ್ಷದ ನಾಯಕ ಆರ್ ಅಶೋಕ, ಸಂಸದರಾದ ಗೋವಿಂದ ಕಾರಜೋಳ, ಶಾಸಕ ಸಿ ಟಿ ರವಿ, ಅಶ್ವಥ ನಾರಾಯಣ, ಮಾಜಿ ಸಂಸದ ನಳಿನಕುಮಾರ ಕಟೀಲ್, ಸದಾನಂದಗೌಡ ಭಾಗವಹಿಸಿದ್ದರು.