ಪ್ರಧಾನಿ ನರೇಂದ್ರ ಮೋದಿ ಅವರು ತರಲು ಉದ್ದೇಶಿಸಿರುವ ಒನ್ ನೇಷನ್ ಒನ್ ಇಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಅವರು, ಮಾಜಿ ಪ್ರಧಾನಿ ದಿವಂಗತ ನೆಹರು ಅವರು 1964 ರಲ್ಲಿ ಈ ಕುರಿತು ಕಲ್ಪನೆಯನ್ನು ಹೊಂದಿದ್ದರು. ಆದರೆ ಇದು ಯಾವ ರೀತಿಯಲ್ಲಿ ಇದೆ ಅನ್ನೋದು ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಡಿಜಿಟಲ್ ಇಂಡಿಯಾ, ಖೋಲೋ ಇಂಡಿಯಾ, ಮೇಕ್ ಇನ್ ಇಂಡಿಯಾ ಘೋಷಣೆಗಳು, ಕೇವಲ ಘೋಷಣೆಗಳಾಗಿ ಉಳಿದಿವೆ. ಮೇಕ್ ಇಂಡಿಯಾದಿಂದ ಏನು ಲಾಭವಾಗಿದೆ ಅನ್ನೋದನ್ನ ಅವರೇ ಹೇಳಬೇಕು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ, 11 ವರ್ಷಗಳಿಂದ ನಡೆಸುತ್ತಿದೆ ಎಂದು ಪರೋಕ್ಷವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.