ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ಪೊಲೀಸ್ ಆಯುಕ್ತರಾಗಿ ಐ ಪಿ ಎಸ್ ಅಧಿಕಾರಿ ರೇಣುಕಾ ಸುಕುಮಾರ ರನ್ನು ವರ್ಗ ಮಾಡಲಾಗಿದೆ. 2011 ನೇ ಸಾಲಿನ ಐ ಪಿ ಎಸ್ ಅಧಿಕಾರಿಯಾಗಿರುವ ರೇಣುಕಾ ಸುಕುಮಾರ ಈ ಹಿಂದೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಲ್ಲಿ ಡಿ ಸಿ ಪಿ ಯಾಗಿ ಕೆಲಸ ಮಾಡಿದ್ದರು. ಮೊದಲ ಲೇಡಿ ಪೊಲೀಸ್ ಕಮಿಷನರ್ ಎಂಬ ಹೆಗ್ಗಳಿಕೆಗೆ ರೇಣುಕಾ ಸುಕುಮಾರ ಭಾಜನರಾಗಿದ್ದಾರೆ.
