ರಾಜ್ಯದ ವಿವಿಧ ಕಡೆಗಳಿಂದ ಪಟ್ಟಣ ಪಂಚಾಯತಿಯಿಂದ ಪುರಸಭೆ, ಪುರಸಭೆಯಿಂದ ನಗರಸಭೆ, ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಗಳು ಬಂದಿವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಿಳಿಸಿದ್ದಾರೆ.
ರಾಜ್ಯದ ಕೆಲವು ದೊಡ್ಡ ಗ್ರಾಮ ಪಂಚಾಯತಿಗಳು, ಪಟ್ಟಣ ಪಂಚಾಯತ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ.
ಗ್ರಾಮ ಪಂಚಾಯತಗಳಲ್ಲಿ 20 ಸಾವಿರ ಜನಸಂಖ್ಯೆ ಇದ್ದರೆ ಮಾತ್ರ ಅಂತಹವುಗಳನ್ನು ಪಟ್ಟಣ ಪಂಚಾಯತ ದರ್ಜೆಗೇರಿಸಲಾಗುವದೆಂದು ಬೈರತಿ ಸುರೇಶ ತಿಳಿಸಿದ್ದಾರೆ.