ರಾಜಕೀಯದಲ್ಲಿ ಯಾರು ಶತ್ರು ಅಲ್ಲಾ, ಯಾರು ಮಿತ್ರ ಅಲ್ಲಾ ಅನ್ನೋದು ಜನಜನಿತವಾದ ಮಾತು. ಆ ಮಾತಿಗೆ ಸಾಕ್ಷಿ ಎಂಬಂತೆ ಇಂದು, ವಕ್ಫ ವಿಚಾರವಾಗಿ ಅಬ್ಬರಿಸುತ್ತಿದ್ದ, ಇಬ್ಬರು ನಾಯಕರು ಕೆಲ ಹೊತ್ತು ಚರ್ಚೆ ನಡೆಸಿದರು.
ವಕ್ಫ ವಿಚಾರ ಸದನದಲ್ಲಿ ದೊಡ್ಡ ಸದ್ದು ಮಾಡಿದಾಗ ಪರಸ್ಪರ ಕಿತ್ತಾಡಿಕೊಂಡಿದ್ದ ಸಚಿವ ಜಮೀರ್ ಅಹ್ಮದ ಖಾನ್, ಯಾವದೇ ಕೆಲಸ ಇದ್ದರು ನನ್ನ ಕಚೇರಿಗೆ ಬನ್ನಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಆಹ್ವಾನ ಕೊಟ್ಟಿದ್ದರು.
ಜಮೀರ್ ಅಹ್ಮದರ ಮಾತಿಗೆ ಸ್ಪಂಧಿಸಿದ ಯತ್ನಾಳ, ಇಂದು ಸುವರ್ಣ ಸೌಧದಲ್ಲಿರುವ ಅಲ್ಪಸಂಖ್ಯಾತರ ಸಚಿವ ಜಮೀರ್ ಅಹ್ಮದ ಖಾನ್ ಕಚೇರಿಗೆ ಭೇಟಿ ನೀಡಿದರು.
ಇಬ್ಬರು ನಾಯಕರು ವಿಜಯಪುರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.
ಸಚಿವರನ್ನು ಭೇಟಿಯಾದದ್ದು ಕೇವಲ ಕ್ಷೇತ್ರದ ಅಭಿವೃದ್ಧಿಯ ವಿಚಾರಗಳಿಗೆ ಸಂಬಂಧಿಸಿದಂತೆ ಹೊರತು ಯಾವುದೇ ಚರ್ಚೆಗಲ್ಲ. ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಜನರ ಆಶೋತ್ತರವನ್ನು ಈಡೇರಿಸಲು ನಾನು ಬದ್ಧನಾಗಿದ್ದೇನೆ ಎಂದು ಯತ್ನಾಳ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಯತ್ನಾಳ ಹಾಗೂ ಜಮಿರ್ ಅಹ್ಮದ ಖಾನ್ ಸುಮಾರು ಅರ್ಧಘಂಟೆಯಷ್ಟು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
