Download Our App

Follow us

Home » ಕರ್ನಾಟಕ » ಹೊಸ ವರ್ಷಾಚರಣೆ. ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ಅಲರ್ಟ. ಫುಲ್ ಟೈಟ್ ಆದವರಿಗೆ……..

ಹೊಸ ವರ್ಷಾಚರಣೆ. ಹುಬ್ಬಳ್ಳಿ ಧಾರವಾಡದಲ್ಲಿ ಪೊಲೀಸ್ ಅಲರ್ಟ. ಫುಲ್ ಟೈಟ್ ಆದವರಿಗೆ……..

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಹೊಸ ವರ್ಷದ ಸ್ವಾಗತಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. 

ರಾತ್ರಿ 10 ಘಂಟೆಯೊಳಗೆ ಲೌಡ್ ಸ್ಪೀಕರ್ ಗಳನ್ನು ಬಂದ ಮಾಡಬೇಕು ಎಂದು ಪೊಲೀಸ್ ಆಯುಕ್ತ ಶಶಿಕುಮಾರ ಸೂಚನೆ ನೀಡಿದ್ದಾರೆ.  

ಡಿಸೆಂಬರ್ 31 ರ ರಾತ್ರಿ ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದುಬಸ್ತ ಮಾಡಲಾಗಿದೆ. ಹೊಸ ವರ್ಷಾಚರಣೆಗೆ ಬೇರೆ ಬೇರೆ ಊರುಗಳಿಂದ ಜನ ಬರುವ ಸಂಭವವಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರವಹಿಸಿದೆ. 

ಕುಡಿದು ವಾಹನ ಚಲಾಯಿಸಿದ್ರೆ ಕೇಸ್ ಬುಕ್….

ಹೊಸ ವರ್ಷಾಚರಣೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವದು, ಹಾಗೂ ಕುಡಿದು ವಾಹನ ಚಲಾಯಿಸುವವರ ಮೇಲೆ ಅವಳಿ ನಗರದ ಪೊಲೀಸರು ಕಣ್ಣಿಡಲಿದ್ದಾರೆ. ಕುಡಿದು ವಾಹನ ಚಲಾಯಿಸುವವರಿಗೆ ಖಾಕಿ ಪಡೆಯ ಟ್ರೀಟ್ ಮೆಂಟ್ ಸಿಗಲಿದೆ. 

ಅಲ್ಲದೇ ಖಾಸಗಿ ಜಾಗೆಯಲ್ಲಿ ಪಾರ್ಟಿ ಮಾಡಲು ಯಾವದೇ ಅಭ್ಯಂತರವಿಲ್ಲ ಆದರೆ ಇದರಿಂದ ಮತ್ತೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಬೇಕೆಂದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ ತಿಳಿಸಿದ್ದಾರೆ.

ಕಾನೂನು ಸುವವ್ಯಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ರೌಡಿ ಪರೇಡ್ ನಡೆಸಿ, ರೌಡಿ ಶೀಟರಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗುತ್ತಿದ್ದು, ಆಯಾಕಟ್ಟಿನ ಪ್ರದೇಶದಲ್ಲಿ ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಕುಂಭಮೇಳಕ್ಕೆ ಹೊರಟಿದ್ದ ಗೋಕಾಕನ 6 ಜನರ ಸಾವು

ಮಧ್ಯಪ್ರದೇಶದ ಜಬಲಪೂರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗೋಕಾಕ್ ನಗರದ ಆರು ಜನ ಶೃದ್ದಾಳುಗಳು ಮೃತಪಟ್ಟಿದ್ದಾರೆ.ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ

Live Cricket

error: Content is protected !!
20:00