ಧಾರವಾಡಕ್ಕೆ ಪ್ರತೈಕ ಪಾಲಿಕೆ ಘೋಷಣೆಯಾದ ಬೆನ್ನಲ್ಲೇ, ಬಿಜೆಪಿ ಹಾಗೂ ಕಾಂಗ್ರೇಸ್ ನಡುವೆ ರಾಜಕೀಯ ಆರಂಭವಾಗಿದೆ.
ಧಾರವಾಡಕ್ಕೆ ಪ್ರತ್ತೈಕ ಮಹಾನಗರ ಪಾಲಿಕೆ ರಚಿಸಲು ಹಗಲಿರುಳು ಶ್ರಮವಹಿಸಿ ಯಶಸ್ವಿಯಾದ ಜನಪ್ರಿಯ ಶಾಸಕ ವಿನಯ ಕುಲಕರ್ಣಿಯವರಿಗೆ ಧನ್ಯವಾದಗಳು ಎಂದು ಕಾಂಗ್ರೇಸ್ ಬ್ಯಾನರ್ ಹಾಕಿದರೆ, ಮತ್ತೊಂದೆಡೆ ಬಿಜೆಪಿ ಧಾರವಾಡ ಪ್ರತ್ತೈಕ ಮಹಾನಗರ ಪಾಲಕೆ ಕನಸು ನನಸು ಮಾಡಿದ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರಿಗೆ ಅಭಿನಂದನೆಗಳು ಎಂದು ಬ್ಯಾನರ್ ಹಾಕಿದೆ.
ಧಾರವಾಡದ ಜ್ಯುಬಿಲಿ ಸರ್ಕಲ್ ನಲ್ಲಿ ಇವೆರಡು ಬ್ಯಾನರ್ ಗಳನ್ನು ನೋಡಿದ ಜನ, ತಲೆ ಕೆಡಿಸಿಕೊಂಡು, ಯಾರೋಪಾ ಇದನ್ನ ತಂದ್ದೋರು ಅಂತ ಚರ್ಚೆಯಲ್ಲಿ ತೊಡಗಿದ್ದಾರೆ.
ಇವರಿಬ್ಬರ ಆಟ ನೋಡಿ ಖರೇ ಹೇಳ್ರಿ ಯಾರು ತಂದಿರಿ ಎಂದು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಜನ ಮುಂದಾಗಿದ್ದಾರೆ.