ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ, ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ವಿನೋದ ಅಸೂಟಿ ಅಭಿಮಾನಿ ಬಳಗ ಹಮ್ಮಿಕೊಂಡಿರುವ ಟಗರಿನ ಕಾಳಗಕ್ಕೆ ನವಲಗುಂದ ಸಜ್ಜಾಗಿದೆ.
ಶನಿವಾರ ಸಂಜೆ 4 ಘಂಟೆಗೆ ರಾಜ್ಯ ಮಟ್ಟದ ಟಗರಿನ ಕಾಳಗ ಆರಂಭವಾಗಲಿದೆ.
ನವಲಗುಂದ ಬಳಿ ಇರುವ ಕುಮಾರಗೊಪ್ಪ ಕ್ರಾಸ್ ನಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದ್ದು, ಮೈದಾನವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.
ಪ್ರೇಕ್ಷಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಮೈದಾನದ ನಾಲ್ಕು ದಿಕ್ಕಿನಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ.
ಟಗರಿನ ಕಾಳಗ ನೋಡಲು ಹತ್ತು ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇದ್ದು, ಗಮನ ಸೆಳೆದಿದೆ.