ಕಳೆದ ಒಂದು ತಿಂಗಳ ಅವಧಿಯಲ್ಲಿ ಧಾರವಾಡದಲ್ಲಿ 5 ಕ್ಕೂ ಹೆಚ್ಚು ಆತ್ಮಹತ್ಯೆಗಳ ವರದಿಯಾಗಿದೆ.
ಧಾರವಾಡ ಯುವಕರಿಗೆ ಏನಾಗಿದೆ ? ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ !
ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಎಲ್ಲರೂ 30 ವಯಸ್ಸಿನ ಒಳಗಿನವರಾಗಿದ್ದಾರೆ.
ಮಾನಸಿಕ ಖಿನ್ನತೆ, ಕೌಟುಂಬಿಕ ಕಲಹ, ದುಶ್ಚಟ, ಬದುಕಿನ ಒತ್ತಡ ಏನೇ ಇದ್ದರು ಮನೆಯಲ್ಲಿ ಕುಳಿತು ಮಾತಾಡಿದರೆ ಸಮಸ್ಯೆ ಬಗೆಹರಿಯುತ್ತದೆ.
ಇದನ್ನೆಲ್ಲಾ ಬಿಟ್ಟು ಏಕಾಏಕಿ ಆತ್ಮಹತ್ಯೆಯ ನಿರ್ಧಾರದಿಂದ ಇಡೀ ಕುಟುಂಬ ಬೀದಿಗೆ ಬರುತ್ತದೆ. ಚಿಕ್ಕ ಮಕ್ಕಳು, ಅಮ್ಮ ಅಪ್ಪನ ಪ್ರೀತಿಯಿಂದ ವಂಚಿತರಾಗುತ್ತಾರೆ.
ಧಾರವಾಡದಲ್ಲಿ ಇಂತಹ ಘಟನೆಗಳು ಆತಂಕ ಹುಟ್ಟಿಸಿವೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ, ಆದಷ್ಟು ತಾಳ್ಮೆಯಿಂದ, ಧೈರ್ಯದಿಂದ ಇದ್ದರೆ ಜಗತ್ತನ್ನೇ ಗೆಲ್ಲಬಹುದು…
ಪ್ಲೀಸ್ ಆತ್ಮಹತ್ಯೆಯ ದಾರಿ ಹಿಡಿಯಬೇಡಿ.
ವರದಿ – ಮುಸ್ತಫಾ ಕುನ್ನಿಭಾವಿ