Download Our App

Follow us

Home » ಕರ್ನಾಟಕ » ಎಸ್ ಪಿ ಫೌಂಡೇಶನ್ ವತಿಯಿಂದ ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಕ್ಷಣಗಣನೆ

ಎಸ್ ಪಿ ಫೌಂಡೇಶನ್ ವತಿಯಿಂದ ನವಲಗುಂದದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಕ್ಷಣಗಣನೆ

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಎಸ್ ಪಿ ಫೌಂಡೇಶನ್ ವತಿಯಿಂದ ನವಲಗುಂದದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ ನಡೆಯಲಿದೆ. 

ಉದ್ಯೋಗ ಮೇಳದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಜರ್ಶಿ ಬಿಡುಗಡೆ ಮಾಡಲಾಯಿತು. 

ಜನರ ಜೀವನ ಸುಗಮಗೊಳಿಸಲು ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಶನಿವಾರ ನಡೆಸಲಿರುವ ಉದ್ಯೋಗ ಮೇಳದ “ಜರ್ಸಿ”ಯನ್ನ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.

ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 2500 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹ ಇದಕ್ಕೆ ಸಹಕಾರ ನೀಡಿದೆ.

ನವಲಗುಂದ ಕ್ಷೇತ್ರದ ಜೊತೆ ಯಾವುದೇ ಭಾಗದ ನಿರುದ್ಯೋಗಿಗಳು ಮೇಳದ ಪ್ರಯೋಜನ ಪಡೆಯಬೇಕೆಂದು ಫೌಂಡೇಷನ್ ಮನವಿ ಮಾಡಿದೆ.

ಅಧಿಕಾರ ಅಂತಸ್ತು ಇದ್ದರು, ಬಹಳಷ್ಟು ಜನ ರಾಜಕಾರಣಿಗಳು, ತಾವಾಯಿತು, ತಮ್ಮ ಕುಟುಂಬವಾಯಿತು ಎಂಬುವವರ ಮಧ್ಯೆ ಶಂಕರ ಪಾಟೀಲ ಮುನೇನಕೊಪ್ಪ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವಲ್ಲಿ ಮಹತ್ತರ ಹೆಜ್ಜೆ ಇಡುವ ಮೂಲಕ ಗಮನ ಸೆಳೆದಿದ್ದಾರೆ.

ಇಂದು ನಡೆದ ಜರ್ಶಿ ಬಿಡುಗಡೆ ಸಂದರ್ಭದಲ್ಲಿ ರಾಜಶೇಖರ ಕಂಪ್ಲಿ, ಸದಾನಂದ ಗಾಳಪ್ಪನವರ, ರೋಹಿತ ಮತ್ತಿಹಳ್ಳಿ, ಪ್ರಭು ಬುಳಗಣ್ಣನವರ, ಮುತ್ತು ಚಾಕಲಬ್ಬಿ, ರವಿಚಂದ್ರನ್ ಹುಬ್ಬಳ್ಳಿ, ಗಂಗಾಧರ ದುಂದೂರ, ವೀರೇಶ ಮಡಿವಾಳರ ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

error: Content is protected !!