Download Our App

Follow us

Home » ಅಪರಾಧ » ಗದಗದಲ್ಲಿ ಬಡ್ಡಿ ಯಲಪ್ಪನ ಮನೆಯಲ್ಲಿ 4 ಕೋಟಿ 90 ಲಕ್ಷ ನಗದು ವಶಕ್ಕೆ

ಗದಗದಲ್ಲಿ ಬಡ್ಡಿ ಯಲಪ್ಪನ ಮನೆಯಲ್ಲಿ 4 ಕೋಟಿ 90 ಲಕ್ಷ ನಗದು ವಶಕ್ಕೆ

ಗದಗ ಬೆಟಗೇರಿಯಲ್ಲಿ ಬಡ್ಡಿ ದಂದೆ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಭಾರಿ ಪ್ರಮಾಣದ ನಗದು ಹಣ, ಬಂಗಾರದ ಒಡವೆ, ಬಾಂಡ್ ಪೇಪರ್, ಬ್ಯಾಂಕ್ ಪಾಸ್ ಬುಕ್ ಹಾಗೂ ಎ ಟಿ ಎಮ್ ಕಾರ್ಡಗಳು ಪೊಲೀಸರ ದಾಳಿಯಲ್ಲಿ ಪತ್ತೆಯಾಗಿವೆ. 

ಗದಗ ಜಿಲ್ಲಾ ಪೊಲೀಸರು ಬಡ್ಡಿ ದಂದೆ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ 12 ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. 

ದಾಳಿ ವೇಳೆ ಬಡ್ಡಿ ಯಲ್ಲಪ್ಪನ ಮನೆಯಲ್ಲಿ 4 ಕೋಟಿ 90 ಲಕ್ಷ ನಗದು ಹಣ ಪತ್ತೆಯಾಗಿದೆ. 

ಇದಲ್ಲದೆ 992 ಗ್ರಾಮ ಬಂಗಾರ, ಸಾಲ ಪಡೆದವರ 650 ಆಸ್ತಿಗಳ ಬಾಂಡ್, 4 ಎ ಟಿ ಎಮ್ ಕಾರ್ಡ್ ಹಾಗೂ 9 ಬ್ಯಾಂಕ್ ಪಾಸ್ ಬುಕ್ ಗಳು ಪೊಲೀಸ್ ದಾಳಿ ವೇಳೆ ಪತ್ತೆಯಾಗಿವೆ ಎನ್ನಲಾಗಿದೆ. 

ವಿವಿಧ ಕಂಪನಿಗಳ 65 ಲೀಟರ್ ಹೈಟೆಕ್ ಮದ್ಯ ಸಹ ಪತ್ತೆಯಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!