ದಾಂಡೇಲಿಯಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿ ತೊಡಗಿದ್ದ ವೈಧ್ಯರನ್ನು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಹುಬ್ಬಳ್ಳಿ ಮೂಲದ ಮೂವರು ನಕಲಿ ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ದಾಂಡೇಲಿ ಪೊಲೀಸ್ ಮೂಲಗಳು ತಿಳಿಸಿವೆ.
ಧರ್ಮರಾಜ ಕಠಾರೆ, ವಿಜಯ ಶಂಕರ ಮೇತ್ರಾಣಿ ಹಾಗೂ ಸತೀಶ ಬಾಗವಾನ ಕೇದಾರಿಯನ್ನು ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ಧರ್ಮರಾಜ ಕೊಠಾರಿ ಎಂಬಾತ ಪತ್ರಿಕೆ ಹೆಸರು ಹೇಳಿ ಎರಡು ತಿಂಗಳ ಹಿಂದೆ ಕುಂದಗೋಳ ಉರ್ದು ಪ್ರೌಢಶಾಲೆಯ ಶಿಕ್ಷಕಿಯನ್ನು ಬ್ಲಾಕ್ ಮೇಲ್ ಮಾಡಿ, ಹಣ ಹೊಡೆಯಲು ಸಂಚು ಮಾಡಿದ್ದ.
