ರಾಜ್ಯದಲ್ಲಿ ಭೀಕರ ಬಿಸಿಲು ವಕೀಲರನ್ನು ಸಹ ಹೈರಾಣುಮಾಡಿದೆ. ಈ ಕಾರಣಕ್ಕಾಗಿ ಹೈಕೋರ್ಟ್ ಮಾರ್ಚ್ 15 ರಿಂದ ಮೇ 31 ರ ವರೆಗೆ ವಕೀಲರು ಕಪ್ಪು ಕೋಟ್ ಧರಿಸಿ, ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ವಿನಾಯ್ತಿ ನೀಡಿದೆ.
ಬೇಸಿಗೆ ಕಾಲ ಮುಗಿಯುವವರೆಗೆ ಈ ಆದೇಶ ಚಾಲ್ತಿಯಲ್ಲಿರಲಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ಕೊಡುವಂತೆ, ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರುಗಳು ಹೈಕೋರ್ಟ್ ಗೆ ಮನವಿ ನೀಡಿದ್ದರು. ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಕಪ್ಪು ಕೋಟ್ ಧರಿಸುವದಕ್ಕೆ ವಿನಾಯ್ತಿ ನೀಡಿದೆ.
