ಸಾಂಸ್ಕೃತಿಕ ನಗರಿ ಧಾರವಾಡ ನಾಳೆ ಹೋಳಿ ಹಬ್ಬಕ್ಕೆ ಸಾಕ್ಷಿಯಾಗಲಿದೆ.
ಧಾರವಾಡದ ಎಲ್ ಐ ಸಿ ಸರ್ಕಲ್ ಬಳಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು ಬಣ್ಣದ ಉತ್ಸವ ಆಯೋಜನೆ ಜೊತೆ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಿದ್ದಾರೆ.
ಧಾರವಾಡದ ಶಿವಾಜಿ ಸರ್ಕಲ್ ನಲ್ಲಿ ಶಾಸಕ ವಿನಯ ಕುಲಕರ್ಣಿ ಬ್ರಿಗೇಡ್ ನಿಂದ ರೇನ್ ಡ್ಯಾನ್ಸ್ ಹಾಗು ಗಡಿಗೆ ಒಡೆಯುವ ಸ್ಪರ್ಧೆ ಆಯೋಜನೆ ಮಾಡಿದ್ದಾರೆ.
ಅಲ್ಲದೇ ಠಿಕಾರೆ ರಸ್ತೆಯಲ್ಲಿ ರಾಮರಾಜ್ಯ ಸಂಘಟನೆಯವರು ಸಹ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಿದ್ದು, ಧಾರವಾಡ ನಾಳೆ ರಂಗುರಂಗಿನ ಬಣ್ಣದಲ್ಲಿ ಮಿಂದೇಳಲಿದೆ.
ನಾಳಿನ ಹಬ್ಬಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಮನವಿ ಮಾಡಿದ್ದಾರೆ.
ನಾಳೆ ನಡೆಯುವ ಬಣ್ಣದ ಹಬ್ಬ ಪ್ರೀತಿ ಬೆಸೆಯುವ ಹಬ್ಬವಾಗಲಿ, ಮೂಕ ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ ಕರ್ನಾಟಕ ಫೈಲ್ಸ್ ಮನವಿ ಮಾಡಿಕೊಳ್ಳುತ್ತದೆ.
ಕುಡಿದು ವಾಹನ ಚಲಾಯಿಸುವದಾಗಲಿ, ಬಣ್ಣದಾಟದಲ್ಲಿ ತೊಡಗುವ ಯುವತಿಯರಿಗೆ ಕಿಚಾಯಿಸುವದಾಗಲಿ ಮಾಡಬೇಡಿ. ಬಣ್ಣದ ಹಬ್ಬ ಬಂಧುತ್ವ ಬೆಸೆಯಲಿ, ಸೌಹಾರ್ದತೆ ಕಾಪಾಡಲಿ.
