ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಇಂದು ಪ್ರಕಟವಾಗಿದೆ.
ಉಡುಪಿ ಒಂದನೇ ಸ್ಥಾನದಲ್ಲಿದ್ದು ಶೇಕಡಾ 93.90 ರಷ್ಟು ಫಲಿತಾಂಶ ಧಾಖಲಿಸಿದೆ.
ಇನ್ನು ಯಾದಗಿರಿ ಕೊನೆಯ ಸ್ಥಾನದಲ್ಲಿದ್ದು ಶೇಕಡಾ 48.45 ರಷ್ಟು ಫಲಿತಾಂಶ ಧಾಖಲಿಸಿದೆ.
ವಿದ್ಯಾಕಾಶಿ ಎಂದು ಹೆಸರಾದ ಧಾರವಾಡ ಜಿಲ್ಲೆ 17 ನೇ ಸ್ಥಾನಕ್ಕೆ ತಲುಪಿದೆ. ಧಾರವಾಡ ಜಿಲ್ಲೆಯಲ್ಲಿ ಶೇಕಡಾ 72.32 ರಷ್ಟು ಫಲಿತಾಂಶ ಧಾಖಲಾಗಿದೆ.
ಇನ್ನು ಕಲಾ ವಿಭಾಗದಲ್ಲಿ, ಇಂದು ಪಿ ಯು ಕಾಲೇಜಿನ ವಿದ್ಯಾರ್ಥಿನಿ, ಬಳ್ಳಾರಿ ಮೂಲದ ಡ್ರೈವರ್ ಮಗಳು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ.
