ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ ಝೆಡ್ ಜಮೀರ್ ಅಹ್ಮದಖಾನ್ ಧಾರವಾಡದಲ್ಲಿ ಬೈಕ್ ಓಡಿಸಿ ಗಮನ ಸೆಳೆದರು.
ಶಾಸಕ ವಿನಯ ಕುಲಕರ್ಣಿಯವರ ಧಾರವಾಡದ ಮನೆಗೆ ಭೇಟಿ ನೀಡಿದ ಬಳಿಕ, ಅಂಜುಮನ್ ಸಂಸ್ಥೆಯವರೆಗೆ ಜಮೀರ್ ಅಹ್ಮದಖಾನ್ ಬೈಕ್ ನಲ್ಲಿ ಬಂದರು.
ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಬೈಕ್ ಹಿಂದೆ ಕುಳಿತಿದ್ದರು.
ಇದೇ ವೇಳೆ ಸಚಿವರು ಅಂಜುಮನ್ ಸಂಸ್ಥೆಯ ಮುಖ್ಯದ್ವಾರ ಉದ್ಘಾಟಿಸಿ, ನಂತರ ಪಿಯು ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
