ಉರ್ದು ಭಾಷೆ ಬಳಕೆ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಉರ್ದು ಭಾಷೆ ಭಾರತದಲ್ಲಿ ಹುಟ್ಟಿದ್ದು, ಇದನ್ನು ಧರ್ಮಕ್ಕೆ ತಳುಕು ಹಾಕುವದು ತಪ್ಪು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮಹಾರಾಷ್ಟ್ರದ ಅಕೋಲಾ ಪಾತೂರ್ ಪಟ್ಟಣದಲ್ಲಿರುವ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅದನ್ನು ಸರ್ವೋಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು, ಉರ್ದು ಭಾರತದಲ್ಲಿ ಹುಟ್ಟಿದ್ದು, ಮರಾಠಿ ಮತ್ತು ಹಿಂದಿಯಂತೆ ಅದು ಇಂಡೋ-ಆರ್ಯನ್ ಭಾಷೆಯಾಗಿದೆ ಎಂದು ಹೇಳಿದೆ.
