ಇದೇ ದಿನಾಂಕ 20 ರಂದು ರವಿವಾರ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕನಕದಾಸ ಶಿಕ್ಷಣ ಸಂಸ್ಥೆಯ ಭವನದಲ್ಲಿ ಕುರುಬ ಸಮಾಜದ ರಾಜ್ಯ ಮಟ್ಟದ ವಧು ವರರ ಸಮಾವೇಶ ನಡೆಯಲಿದೆ.
ಇದೊಂದು ಉಚಿತ ವಧು ವರರ ಸಮಾವೇಶವಾಗಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕುರುಬ ಸಮಾಜದ ವಧು ವರರು ಆಗಮಿಸಲಿದ್ದಾರೆ ಎಂದು ಸಂಘಟಕ ಹನುಮಂತಪ್ಪ ಕಂಬಳಿ ತಿಳಿಸಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು, ವೈದ್ಯರು, ಇಂಜೀನಿಯರಗಳು ಸೇರಿದಂತೆ ಅನೇಕ ವಧು ವರರು ಭಾಗವಹಿಸಲಿದ್ದಾರೆ.
ಕುರುಬ ಸಮಾಜದ ವಧು ವರರ ಸಮಾವೇಶದಲ್ಲಿ ಭಾಗವಹಿಸುವವರು ಹನುಮಂತಪ್ಪ ಕಂಬಳಿಯವರನ್ನು ( 94493 56122 ) ಸಂಪರ್ಕಿಸಬಹುದಾಗಿದೆ.
