ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಈ ಅಸಂವಿಧಾನಿಕ ತಿದ್ದುಪಡಿಯ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸಮಿತಿಯು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿದ್ದು, ಇದರ ಅಂಗವಾಗಿ ರಾಜ್ಯದ್ಲಲಿ *ವಕ್ಫ್ ಸಂರಕ್ಷಣೆ -ನಮ್ಮ ಹೊಣೆ* ಎಂಬ ಶೀರ್ಷಿಕೆ ಅಡಿಯಲ್ಲಿ ದಿನಾಂಕ 20ನೇ ಏಪ್ರಿಲ್ ರಿಂದ ಏಪ್ರಿಲ್ 27ರ ವರೆಗೆ ರಾಜ್ಯವ್ಯಾಪಿ ಚಳುವಳಿ ಹಮ್ಮಿಕೊಂಡಿದೆ.
ಈ ಚಳುವಳಿಯ ಭಾಗವಾಗಿ ರಾಜ್ಯಾದ್ಯಂತ ಪತ್ರಿಕಾಗೋಷ್ಟಿ, ಬಿತ್ತಿ ಪತ್ರ , ವಿಚಾರಗೋಷ್ಠಿಗಳು, ಪ್ರತಿಭಟನೆ, ಧರಣಿ ಸತ್ಯಾಗ್ರಹ, ಪಾದಯಾತ್ರೆ, ಸಹಿ ಸಂಗ್ರಹಣೆ, ಕರಪತ್ರ ಹಂಚಿಕೆ, ಹೀಗೆ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು.
ವಕ್ಫ್ ತಿದ್ದುಪಡಿ ಕಾಯ್ದೆಯು ಸಂವಿಧಾನಿಕ ಚೌಕಟ್ಟಿನ ವಿರುದ್ಧವಾಗಿದೆ. ವಿಧಿ 14ರ ಪ್ರಕಾರ ಇದು ತಾರತಮ್ಯ ವೆಂದು ಪರಿಗಣಿಸಲಾಗುವುದು. ಏಕೆಂದರೆ ಇದು ಮುಸ್ಲಿಂ ದತ್ತಿಗಳಿಗೆ ಮಾತ್ರ ಅಸಮಾನವಾಗಿ ಪರಿಣಾಮ ಬಿರುತ್ತದೆ.
ಅದೇರೀತಿ ವಿಧಿ 25 ಮತ್ತು 28ರ ಪ್ರಕಾರ ಈ ಕಾಯ್ದೆಯು ಮುಸ್ಲಿಂ ನಾಗರಿಕರ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು ಮತ್ತು ಸ್ವಾತಂತ್ರವನ್ನು ಉಲಂಘಿಸುತ್ತದೆ.
ವಿಧಿ 30 ರ ಪ್ರಕಾರ ಮುಸ್ಲಿಂ ನಾಗರಿಕರಿಗೆ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆಮಾಡುವ ಮತ್ತು ನಿರ್ವಹಣೆ ಮಾಡುವ ಹಕ್ಕಿನಲ್ಲು ಕೂಡ ಹಸ್ತಕ್ಷೇಪ ಮಾಡುತ್ತದೆ.
ಈ ಕಾಯ್ದೆ ವಕ್ಫ್ ಆಸ್ತಿಗಳ ಮೂಲ ಉದ್ದೇಶವನ್ನು ಬದಲಾಯಿಸಲು ಅವಕಾಶ ನೀಡುತ್ತದೆ, ಇದು ವಕ್ಫ್ ಆಸ್ತಿಯ ಶಾಶ್ವತ ಸಮರ್ಪಣೆಯ ಇಸ್ಲಾಮಿ ತತ್ವಕ್ಕೆ ವಿರುದ್ಧವಾಗಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲ ಉದ್ದೇಶ ವಕ್ಫ್ ಆಸ್ತಿಗಳ ಮೇಲೆ ಸರಕಾರದ ನಿಯಂತ್ರಣ ಹೆಚ್ಚಿಸುವುದು ಮತ್ತು ವಕ್ಫ್ ಸಂಸ್ಥೆಯ ಸ್ವಾಯತ್ತತ್ತೆಯನ್ನು ದುರ್ಬಲಗೊಳಿಸುತ್ತದೆ.
ವಕ್ಫ್ ಕಾಯ್ದೆ 1995 ರ ಸೆಕ್ಷನ್ 3(ಆರ್) ರಲ್ಲಿ 5 ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸುವ ಸ್ಥಿತಿಯನ್ನು ಸೇರಿಸುವುದು,
ವಕ್ಫ್ ರಚಿಸಲು ಅರ್ಹತಾ ಮಾನದಂಡವಾಗಿ 5 ವರ್ಷಗಳ ಪೂರ್ವಾಪೇಕ್ಷಿತ ಷರತ್ತು ವಿಚಿತ್ರ ಮತ್ತು ಅಸಂಬದ್ಧವಾಗಿದೆ.
ಈ ತಿದ್ದುಪಡಿಯ ಮೂಲಕ ಅವನು/ ಅವಳು ಮುಸ್ಲಿಂ ಎಂದು ನಿರ್ಧರಿಸುವ ಅಧಿಕಾರ ಯಾರಿಗೆ ಇರುತ್ತದೆ ಎಂಬ ಬಗ್ಗೆ ಅನುಮಾನವಿದೆ. ವಕ್ಫ್ ಕಾಯ್ದೆ 2025 ರ ಈ ನಿಬಂಧನೆಯು ಅಸಂವಿಧಾನಿಕ ಮತ್ತು ಸಂಸತ್ತಿನ ಸಾಮರ್ಥ್ಯವನ್ನು ಮೀರಿದೆ.
ಹಾಗಾಗಿ ಯಾವುದೇ ಕಾರಣಕ್ಕೂ ಈ ಕಾಯ್ದೆಯನ್ನು ಒಪ್ಪಲಾಗದು ಸರಕಾರ ಈ ಕಾಯ್ದೆ ವಾಪಸ್ ಪಡೆಯವವರೆಗೂ ಹೋರಾಟ ನಡೆಸಲಾಗುವುದು, ಇದು ಕೇವಲ ಒಂದು ಸಮುದಾಯದ ವಿಷವಲ್ಲದೆ ಸಂವಿಧಾನ ವಿರೋಧಿ ನಡೆಯಾಗಿದ್ದು ರಾಜ್ಯದ ಎಲ್ಲಾ ನಾಗರಿಕರು ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ವೆಲ್ಫೇರ್ ಪಾರ್ಟಿ ಅಗ್ರಹಿಸಿದೆ.
ಕೇಂದ್ರ ಸರ್ಕಾರದ ನಡೆ ದ್ವೇಷದಿಂದ ಕೂಡಿದೆ. ಇಂತಹ ಸೂಕ್ಷ್ಮ ವಿಷಯದಲ್ಲಿ ದ್ವೇಷ ಸಾಧಿಸುವಂಥದ್ದು ಸರಿಯಲ್ಲ. ಕೇಂದ್ರವು ಸಂಯಮದಿಂದ ನಡೆದುಕೊಳ್ಳಬೇಕಿತ್ತು. ಹಿಂದೂ ಧರ್ಮದ ಟ್ರಸ್ಟ್‌ಗಳು, ವಕ್ಫ್ ಮಂಡಳಿ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಭೂಮಿ ಮೇಲೆ ಹಕ್ಕು ಇರುವುದು ರಾಜ್ಯಕ್ಕೆ. ರಾಜ್ಯದ ಹಕ್ಕನ್ನು ಕಿತ್ತುಕೊಳ್ಳುವ ಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಎಲ್ಲರೂ ಸಹಕರಿಸಿಬೇಕೆಂದು ಈ ಮೂಲಕ ಆಗ್ರಹಿಸಿದೆ.
ಈ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್, ರಾಜ್ಯ ಉಪಾಧ್ಯಕ್ಷ ಇಂಜಿನಿಯರ್ ಹಬಿಬುಲ್ಲಾಹ್ ಖಾನ್ ಹಾಗೂ ಮಾಧ್ಯಮ ಸಂಚಾಲಕ ರಿಜ್ವಾನ್ ಹುಮನಾಬಾದ್ ಉಪಸ್ಥಿತರಿದ್ದರು.
