ಕರ್ನಾಟಕ ಕಾಂಗ್ರೇಸ್, ಎಂದಿನಂತೆ ಬಿಜೆಪಿಗರ ಕಾಲೆಳೆಯುತ್ತಲೇ, ನೂತನ ಬಿಜೆಪಿ ಅಧ್ಯಕ್ಷರ ನೇಮಕವನ್ನು ಸ್ವಾಗತಿಸಿದೆ. ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರುವ, ಹೈಕಮಾಂಡ, ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಆಯ್ಕೆ ಎಂದು ವ್ಯಂಗ್ಯವಾಡಿದೆ.
ಯಡಿಯೂರಪ್ಪನವರ ಮಗನ ರಾಜ್ಯಾಧ್ಯಕ್ಷ ಹುದ್ದೆ ಕೇವಲ ಲೋಕಸಭೆ ಚುನಾವಣೆವರೆಗೆ ಮಾತ್ರ ಎಂಬ ಗುಸುಗುಸು ಪಿಸುಪಿಸು ಜಗನ್ನಾಥ ಭವನದಲ್ಲಿ ಕೇಳಿ ಬರುತ್ತಿದೆಯಂತೆ! ಈ ಮಾತು ಸಿ ಟಿ ರವಿ, ಬಸನಗೌಡ ಪಾಟೀಲ ಯತ್ನಾಳ ಮತ್ತು ಬಿ ಎಲ್ ಸಂತೋಷರನ್ನು ಸಮಾಧಾನಪಡಿಸಲೋ, ಅಥವಾ ಆಯ್ಕೆಯಲ್ಲಿ ನೈಜತೆ ಇದೆಯೋ ಅನ್ನೋದನ್ನ ಕರ್ನಾಟಕ ಬಿಜೆಪಿ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ಕಾಂಗ್ರೇಸ್ ಟ್ವಿಟ್ ಮಾಡಿ ಆಗ್ರಹಿಸಿದೆ. ಬಿಜೆಪಿಯನ್ನು ಕುಟುಂಬ ಜನತಾ ಪಕ್ಷ ಎಂದು ಕರೆಯುವ ಮೂಲಕ ಮತ್ತಷ್ಟು ಕಿಚಾಯಿಸಿದೆ.