ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಎಸ್ ಬಿ ಐ ನಿವೃತ್ತ ಮ್ಯಾನೇಜರನ ಕೊಲೆ ಯತ್ನ ನಡೆದಿದೆ. ಬೈಕ್ ಮೇಲೆ ಹೊರಟಿದ್ದ ನಿವೃತ್ತ ಬ್ಯಾಂಕ ಮ್ಯಾನೇಜರನ ದ್ವಿಚಕ್ರ ವಾಹನ ನಿಲ್ಲಿಸಿದ ನಾಲ್ವರು ಅಪರಿಚಿತರು, ಮಚ್ಚು ಬೀಸಿದ್ದಾರೆ. ಮಗನ ಜೊತೆ ಬೈಕ್ ಮೇಲೆ ಇದ್ದ ಜಯರಾಮ್ ವಾಹನ ನಿಲ್ಲಿಸುತ್ತಿದ್ದಂತೆ ಎರಡು ಬೈಕಗಳಲ್ಲಿ ಬಂದವರು ಮನಸೋ ಇಚ್ಛೆ ಮಚ್ಚು ಬೀಸಿದ್ದಾರೆ. ಘಟನೆಯಲ್ಲಿ ಜಯರಾಮ ಹೊಟ್ಟೆಗೆ ಮಚ್ಚು ಬಿದ್ದಿದ್ದು, ಅಲ್ಲಿದ್ದವರು ಗಾಯಾಳು ಜಯರಾಮರನ್ನು ತಕ್ಷಣ ಆಸ್ಪತ್ರೆಗೆ ಧಾಖಲಿಸಿದ್ದಾರೆ. ಈ ಘಟನೆಯಿಂದ ಹಾವೇರಿ ನಗರ ಬೆಚ್ಚಿ ಬಿದ್ದಿದೆ.
