ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಅನಧಿಕೃತ ಶಾಲೆಗಳ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿ ಸಚಿವಾಲಯ ವಿವರ ಕೇಳಿದ ಬೆನ್ನಲ್ಲೇ ರಾಜ್ಯದಲ್ಲಿ 1300 ಅನಧಿಕೃತ ಶಾಲೆಗಳು ಪತ್ತೆಯಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ, ನೋಂದಣಿ ಮಾಡದ ಮತ್ತು ಅನುಮತಿ ಪಡೆಯದೆ ನಡೆಸುತ್ತಿದ್ದ ಶಾಲೆಗಳನ್ನು ಅನಧಿಕೃತ ಶಾಲೆಗಳೆಂದು ಪರಿಗಣಿಸಿದೆ. ಇಂತಹ ಶಾಲೆಗಳನ್ನು ಕೊಡಲೇ ಮುಚ್ಚಬೇಕೆಂದು ಆದೇಶ ಹೊರಡಿಸಿದ್ದು, ಪಾಲಕರು ಎಚ್ಚರ ವಹಿಸುವಂತೆ ಮನವಿ ಮಾಡಿದೆ. ಮಾನ್ಯತೆ ಪಡೆಯದ ಶಾಲೆಗಳಲ್ಲಿ ಮಕ್ಕಳನ್ನು ಧಾಖಲು ಮಾಡದಂತೆ ಹೇಳಿದೆ. ಧಾರವಾಡ ಜಿಲ್ಲೆಯ ಗರಗ, ಮನ್ಸೂರ್ ಗ್ರಾಮ ಸೇರಿದಂತೆ ನಾಲ್ಕು ಶಾಲೆಗಳ ಮಾನ್ಯತೆ ರದ್ದು ಮಾಡಲಾಗಿದೆ.
m
