ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಣಕಾಸು ಇಲಾಖೆ ಒಪ್ಪಿಗೆ ಇಲ್ಲದೆ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆರೋಪಿಸಿದ್ದಾರೆ. ಬೊಮ್ಮಾಯಿ ಸರ್ಕಾರದಲ್ಲಿ ಆದ ಕಾಮಗಾರಿಗಳಿಗೆ ಬಿಲ್ ಕೊಡದೆ ಇರೋ ಕಾರಣ ಅದು ಹಾಗೇ ಉಳಿದಿದೆ ಎಂದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಮಗಾರಿಯ ಬಿಲ್ ಬಾಕಿ ಇದ್ದರೆ ಅದರ ಬಗ್ಗೆ ಮಾತಾಡಲಿ ಎಂದ ಅವರು, ಬಿಜೆಪಿಯವರು ರಾಡಿ ಎಬ್ಬಿಸಿ ಹೋಗಿದ್ದಾರೆ ಎಂದು ಕಟುಕಿದರು. ಕಾಂಗ್ರೇಸ್ ಸರ್ಕಾರ ಬಂದು ಮೂರು ತಿಂಗಳಾಯಿತು, ಇದೀಗ ಬಿಲ್ ಬಾಕಿ ಬಗ್ಗೆ ಒತ್ತಡ ಹಾಕೋಣ ಎಂದು ಬಿಜೆಪಿ ಮಸಲತ್ತು ಮಾಡುತ್ತಿದೆ ಎಂದು ಅವರು ಆರೋಪಿಸಿದರು.
