ಅಂದು ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕ ದಿನ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಅಮೋಘ ಘಳಿಗೆ.ಬಿಡನಾಳ ಗ್ರಾಮದಲ್ಲಿ ಅಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಆ ಅಮೃತ ಘಳಿಗೆಯನ್ನು ಸ್ಮರಣೆಯಲ್ಲಿಟ್ಟುಕೊಳ್ಳಲು ಬಿಡನಾಳದಲ್ಲಿ ಅಂದು ನಾಲ್ವರು ಯುವಕರು ನೆಟ್ಟಿದ್ದ ಮರವನ್ನು ಇದೀಗ ಅರಣ್ಯ ಇಲಾಖೆ ತೆರವುಗೊಳಿಸಿದೆ. ಬೃಹತ ಮರ ಧರೆಗೆ ಉರುಳುತ್ತದೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿದೆ. ಕಳೆದ ವರ್ಷವಷ್ಟೇ ಆಜಾಧಿಕಾ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಈ ಮರಕ್ಕೆ ಹೂವಿನಿಂದ ಅಲಂಕರಿಸಲಾಗಿತ್ತು. ಮರಕ್ಕೆ ಪೂಜೆ ಸಲ್ಲಿಸಲಾಗಿತ್ತು. ತೆರವುಗೊಳಿಸಿದ ಸ್ಥಳದಲ್ಲಿಯೇ ಅಗಸ್ಟ 15 ರಂದು ಮತ್ತೊಂದು ಸಸಿ ನೆಡಲು ಪಾಲಿಕೆಯ ಮಾಜಿ ಸದಸ್ಯ ಹಾಗೂ ಕಾಂಗ್ರೇಸ್ ಮುಖಂಡ ಮೋಹನ ಅಸುಂಡಿ ತೀರ್ಮಾನಿಸಿದ್ದಾರೆ. ಅಂದು ಸಸಿ ನೆಟ್ಟಿದ್ದ 84 ವಯಸ್ಸಿನ ರಾಮನಗೌಡ ಪಾಟೀಲ್, 88 ವಯಸ್ಸಿನ ಮಲ್ಲೇಶಪ್ಪ ಹಿರೂರ, 86 ವಯಸ್ಸಿನ ಸಿದ್ದಪ್ಪ ಮೇಟಿ, 86 ವಯಸ್ಸಿನ ಭರಮಪ್ಪ ಅಂಚಟಗೇರಿ ಮತ್ತು ಹುಸೇನಸಾಬ ನದಾಫ ಎಂಬುವವರನ್ನು ಸನ್ಮಾನ ಮಾಡಲು ತೀರ್ಮಾನಿಸಿದ್ದಾರೆ.
