ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಸದ್ದಿಲ್ಲದೇ ನಡೆದಿವೆ. ಬಿಜೆಪಿಯ ಇಬ್ಬರು ಮಾಜಿ ಶಾಸಕರಿಗೆ ಕಾಂಗ್ರೇಸ್ ಗಾಳ ಹಾಕಿದೆ. ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರನ್ನು ಸೋಲಿಸಲು ಕಾಂಗ್ರೇಸ್ ತಾಲೀಮು ಆರಂಭಿಸಿದೆ.
ಕುಂದಗೋಳದ ಬಿಜೆಪಿ ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ ಹಾಗೂ ನವಲಗುಂದದ ಮಾಜಿ ಶಾಸಕ, ಶಂಕರ ಪಾಟೀಲ್ ಮುನೇನಕೊಪ್ಪರನ್ನು ಕಾಂಗ್ರೇಸ್ ಮುಖಂಡರು ಈಗಾಗಲೇ ಭೇಟಿಯಾಗಿ ಚರ್ಚಿಸಿದ್ದಾರೆ. ಇವರನ್ನು ಕರೆತರುವ ಜವಾಬ್ದಾರಿಯನ್ನು ಜಗದೀಶ ಶೆಟ್ಟರ ಹೆಗಲಿಗೆ ವಹಿಸಲಾಗಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ, ಚಿಕ್ಕನಗೌಡ್ರ, ಕಾಂಗ್ರೇಸ್ ಸೇರ್ಪಡೆಯಾಗ್ತಾರೆ ಅನ್ನೋದನ್ನ ಕೇಳಿದ್ದೇನೆ ಎಂದಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೇಸ್ಸಿಗೆ ಬರೋದಾದ್ರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳುವ ಮೂಲಕ ಆಪರೇಷನ್ ಎಕ್ಸ್ ನಡೆದಿರುವ ಸಂದೇಶ ರವಾನಿಸಿದ್ದಾರೆ
.