ಮೈಸೂರು : ಮೈಸೂರು ಉಸ್ತುವಾರಿ ಸಚಿವ ಡಾ. ಎಚ್ ಮಹದೇವಪ್ಪ ಸಾರ್ವಜನಿಕ ದ್ವಜಾರೋಹಣದ ವೇಳೆ ಸುಸ್ತಾದ ಘಟನೆ ನಡೆದಿದೆ. ಬಿಸಿಲಿನ ತಾಪಕ್ಕೆ ಬಳಲಿದ ಅವರು ಸಾರ್ವಜನಿಕ ದ್ವಜಾರೋಹಣ ನೆರವೇರಿಸಿದ್ದರು. ತದನಂತರ. ಭಾಷಣ ಮಾಡುವಾಗ ಬಿಸಿಲಿನ ತಾಪಕ್ಕೆ ಎರಡು ಬಾರಿ ನೀರು ಕುಡಿದಿದ್ದರು. ಭಾಷಣ ನಂತರ ಬಾಣಂಗಳದಲ್ಲಿ ಬಲೂನ್ ಹಾರಿ ಬಿಡಬೇಕಿತ್ತು. ಅಷ್ಟರಲ್ಲಿ ವೇದಿಕೆಗೆ ಬಂದ ಸಚಿವ ಮಹದೇವಪ್ಪ ಅವರನ್ನು ಪಕ್ಕದಲ್ಲಿ ಇದ್ದ ಎಸ್ ಪಿ ರಮೇಶ ಬಾನೋತ್ ಹಾಗೂ ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಹಾದೇವಪ್ಪರ ಸಹಾಯಕ್ಕೆ ಬಂದು ಅವರನ್ನು ಕುರ್ಚಿ ಮೇಲೆ ಕುಳ್ಳರಿಸಿದರು. ಬಳಿಕ ಗಣ್ಯರು ಬಲೂನ್ ಹಾರಿ ಬಿಟ್ಟರು.
