ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಬಿಜೆಪಿ ನಾಯಕರು ಹತಾಸೆಗೊಂಡಿದ್ದಾರೆ. ದಿನಕ್ಕೊಂದು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸಿ ಟಿ ರವಿ ಕಮಿಷನ್ ಆರೋಪ ಮಾಡುತ್ತಿರುವದಕ್ಕೆ ತಿರುಗೇಟು ಕೊಟ್ಟ ಶೆಟ್ಟರ, ಸಿ ಟಿ ರವಿ ಏನು ಸತ್ಯ ಹರಿಶ್ಚಂದ್ರನಾ ಅಂತ ಗುಡುಗಿದರು. ಅವರು ಹೇಳಿದ್ದೇಲ್ಲ ನಿಜಾನಾ ಅಂತ ಪ್ರಶ್ನಿಸಿದರು. ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದ ಬಿಜೆಪಿಯವರು ಮಾಡಿದ್ದೇನು ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಶೆಟ್ಟರ ಮೇಲೆ ಬಿಜೆಪಿಯ ಮುಖಂಡರು ಸಾಲು ಸಾಲಾಗಿ ಬೆನ್ನಿಗೆ ಬಿದ್ದಿದ್ದು, ನಾನೊಬ್ಬ ಬಡಪಾಯಿ, ನನ್ನ ಬೆನ್ನು ಯಾಕೆ ಬಿದ್ದಿದ್ದೀರಿ ಎಂದು ಪ್ರಶ್ನಿಸಿದರು. ಟಿಕೇಟ್ ತಪ್ಪಿಸಿದ್ದರಿಂದ ನಾನು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಅವರು ಭಾವಿಸಿದ್ದರು, ನಾನು ಕಾಂಗ್ರೇಸ್ ಸೇರಿದ ಮೇಲೆ ಏನಾಯಿತು ಅನ್ನೋದು ಅವರಿಗೆ ಗೊತ್ತಾಗಿದೆ ಎಂದು ತಿಳಿಸಿದರು.
