ಧಾರವಾಡ ಬಳಿ ಇರುವ ಬೇಲೂರು ಅಂಡರಪಾಸ್ ನಲ್ಲಿ ಗ್ಯಾಸ್ ಸಿಲೆಂಡರ್ ವಾಹನ ಸಿಲುಕಿದ ಪರಿಣಾಮ ಅನೀಲ್ ಸೋರಿಕೆ ನಿಯಂತ್ರಣಕ್ಕೆ ತರಲು ಹರಸಾಹಸಪಡುತ್ತಿದ್ದಾರೆ. ಬೇಲೂರು ಕೈಗಾರಿಕಾ ಪ್ರದೇಶದಾಧ್ಯಂತ ಅನೀಲ್ ಸೋರಿಕೆಯ ವಾಸನೆ ಹರಡಿದೆ.
ಬೇಲೂರು ಅಕ್ಕಪಕ್ಕದ ಹಳ್ಳಿಗಳಾದ ಮಮ್ಮಿಗಟ್ಟಿ, ಕೋಟುರ, ಸಿಂಗನಹಳ್ಳಿ, ಬೇಲೂರು ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಬುಧವಾರ ಸಂಜೆ 6 ಘಂಟೆಯಿಂದ ಅನೀಲ್ ಸೋರಿಕೆಯಾಗುತ್ತಿರುವ ಪರಿಣಾಮ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಹತ್ತು ಸಾವಿರಕ್ಕೂ ಹೆಚ್ಚು ವಾಹನಗಳು ನಿಂತಿದ್ದು, ಬೆಳಗಾವಿ ಮತ್ತು ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ನಾಳೆ ಬೆಳಗಿನವರೆಗೆ ಅನೀಲ್ ಸೋರಿಕೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಾಗಿ ರಸ್ತೆ ಸಂಪರ್ಕ ನಿಷೇಧಿಸಲಾಗಿದೆ.
