ಧಾರವಾಡ ಜಿಲ್ಲೆಯ ಬಸಾಪುರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಒಂದೂವರೆ ವರ್ಷದ ಆಕಾಶ ಬಸವರಾಜ ಪೂಜಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಾಗಿದ್ದ, ಚಿಕಿತ್ಸೆ ಫಲಕಾರಿಯಾಗದ ಹಿನ್ನೇಲೆ ಆಕಾಶ ಹೃದಯ ಬಡಿತ ನಿಲ್ಲಿಸಿದ್ದಾನೆ ಎಂದು ಕಿಮ್ಸ್ ವೈದ್ಯರು ಹೇಳಿದ್ದರು. ಮೃತಪಟ್ಟಿದ್ದಾನೆಂದು ಘೋಷಿಸಿದ್ದ ಆಕಾಶನನ್ನು ಊರಲ್ಲಿಯೇ ಅಂತ್ಯಕ್ರೀಯೆ ಮಾಡಲು ಆತನ ಪಾಲಕರು ಬಸಾಪುರ ಗ್ರಾಮಕ್ಕೆ ಕರೆದುಕೊಂಡು ಬಂದರು. ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನ ನಡೆದಿತ್ತು. ಇನ್ನೇನು ಮೃತ ಬಾಲಕನ ಬಾಯಲ್ಲಿ ಎರಡು ಹನಿ ನೀರು ಹಾಕುತ್ತಿದ್ದಂತೆ ಬಾಲಕ ಉಸಿರಾಡಿದ್ದಾನೆ. ಬಾಲಕ ಬದುಕುಳಿದಿದ್ದಾನೆ ಎಂದು ತಿಳಿದ ಅಲ್ಲಿ ಸೇರಿದ್ದ ಜನ, ಆಕಾಶನನ್ನು ಕೂಡಲೇ ನವಲಗುಂದ ಆಸ್ಪತ್ರೆಗೆ ಧಾಖಲಿಸಿದ್ದಾರೆ. ವೆಂಟಿಲೇಟರ ಕೊರತೆಯಿಂದ ಸಧ್ಯ ಆಕಾಶನನ್ನು ಮತ್ತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಧಾಖಲಿಸಲಾಗಿದ್ದು ಐ ಸಿ ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ವೈದ್ಯಕೀಯ ಲೋಕಕ್ಕೆ ಸವಾಲೆಸೆದಿದೆ.
ಆಸ್ಪತ್ರೆಯಲ್ಲಿ ಸತ್ತಿದ್ದ ಬಾಲಕ, ಸ್ಮಶಾನದಲ್ಲಿ ಜೀವಂತ. ಬಸಾಪುರದಲ್ಲಿ ಅಚ್ಚರಿಯ ಘಟನೆ
RELATED LATEST NEWS
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
ಮಹಾರಾಷ್ಟ್ರದಲ್ಲಿ ಮಹಾಸ್ಫೋಟ. ಭೀಕರ ಸ್ಫೋಟಕ್ಕೆ 8 ಬಲಿ
24/01/2025
4:23 pm
Top Headlines
ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?
24/01/2025
5:40 pm
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಎತ್ತಂಗಡಿ ಮಾಡಲಾಗಿದೆಯಂತೆ. ಇಂತಹದೊಂದು ಸುದ್ದಿ ವೇಗವಾಗಿ ಹರದಾಡುತ್ತಿದ್ದು, ವರ್ಗಾವಣೆ ಖಚಿತ ಎನ್ನಲಾಗಿದೆ. ಪಾಲಿಕೆ ಆಯುಕ್ತರಾಗಿರುವ ಈಶ್ವರ
ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?
24/01/2025
5:40 pm
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
ಮಹಾರಾಷ್ಟ್ರದಲ್ಲಿ ಮಹಾಸ್ಫೋಟ. ಭೀಕರ ಸ್ಫೋಟಕ್ಕೆ 8 ಬಲಿ
24/01/2025
4:23 pm