ಸದಾ ಒಂದಿಲ್ಲೊಂದು ವಿವಾದಕ್ಕೆ ಕಾರಣವಾಗುವ ಹುಬ್ಬಳ್ಳಿ ಇದಗಾ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಗಣೇಶ ಪ್ರತಿಷ್ಟಾಪನೆ ವಿಷಯವಾಗಿ ಅವಕಾಶ ನೀಡುವ ಪಾಲಿಕೆಗೆ ಬಿಟ್ಟ ವಿಷಯ ಎಂದು ಗೃಹ ಸಚಿವ ಜಿ ಪರಮೇಶ್ವರ್. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಪಾಲಿಕೆ ಆಡಳಿತ ಸರ್ಕಾರದ ಅನುಮತಿ ಪಡೆದು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿದ್ದರು ಎಂದು ಹೇಳಿದರು. ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವ ಮುನ್ನ ಪಾಲಿಕೆ ಮತ್ತು ಪೊಲೀಸ್ ಆಯುಕ್ತರು ಪರಿಶೀಲಿಸುತ್ತಾರೆ. ಕಾನೂನು ಸುವ್ಯವಸ್ಥೆ ಬಗ್ಗೆ ಕಮಿಷನರ್ ತೀರ್ಮಾನ ಮಾಡುತ್ತಾರೆ. ಆವಾಗ ಇಲಾಖೆಯ ಮುಂದೆ ಈ ಪ್ರಶ್ನೆ ಬರುತ್ತದೆ ಎಂದು ಪರಮೇಶ್ವರ ಅವರು.
