ಮೋಹಕ ನಗೆ ಬೀರಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗರನ್ನು ಖೆಡ್ಡಾಕೆ ಕೆಡುವುತ್ತಿದ್ದ ಖತರನಾಕ್ ಹುಡುಗಿ ಮತ್ತು ಆಕೆಯ ಟೀಮ್ ಇದೀಗ ಪುಟ್ಟೇನಹಳ್ಳಿ ಪೊಲೀಸರ ಅತಿಥಿಯಾಗಿದ್ದಾರೆ. ಬೆಂಗಳೂರಿನ ಜೆ ಪಿ ನಗರದ ವಿನಾಯಕ ನಗರದಲ್ಲಿ ಮನೆ ಮಾಡಿಕೊಂಡಿದ್ದ ಶರಣಪ್ರಕಾಶ ಬಳಿಗೇರ, ಯಾಸಿನ್, ಮತ್ತು ಅಬ್ದುಲ್ ಖಾದರ್ ಎಂಬ ಪಿಶಾಚಿಗಳು, ನೇಹಾ ಎಂಬ ಯುವತಿಯನ್ನು ಮುಂದಿಟ್ಟುಕೊಂಡು ಹನಿ ಟ್ರಾಪ್ ಮಾಡುತ್ತಿದ್ದರು. ಹನಿ ಟ್ರಾಪ್ ದಂದೆ, ದೊಡ್ಡ ಮಟ್ಟದ ಹಣ ತಂದುಕೊಡುತ್ತಿದ್ದಂತೆ ಟೆಲಿಗ್ರಾಮ್ ನಲ್ಲಿ ನೇಹಾ ಯುವಕರನ್ನು ಪರಿಚಯ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಳು. ಸಧ್ಯ ನೇಹಾ ಸೇರಿದಂತೆ ಖತರನಾಕ್ ತಂಡವನ್ನು ಪುಟ್ಟೇನಹಳ್ಳಿ ಪೊಲೀಸರು ಹೆಡಮುರಿಗೆ ಕಟ್ಟಿದ್ದಾರೆ. ಬಂಧಿತರು 30 ಲಕ್ಷದವರೆಗೆ ಸಂಪಾದನೆ ಮಾಡಿದ್ದಾರೆಂದು ದಕ್ಷಿಣ ವಿಭಾಗದ ಡಿ ಸಿ ಪಿ ಕೃಷ್ಣಕಾಂತ ತಿಳಿಸಿದ್ದಾರೆ.
