Download Our App

Follow us

Home » ಅಪರಾಧ » ಎಚ್ಚರ…… ಈ ಔಷಧಿಗಳಿಂದ ಜೀವಕ್ಕೆ ಅಪಾಯ.

ಎಚ್ಚರ…… ಈ ಔಷಧಿಗಳಿಂದ ಜೀವಕ್ಕೆ ಅಪಾಯ.

ಭಾರತ ಸರ್ಕಾರದ ಕೇಂದ್ರ ಔಷಧಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ, ಮಾನವನ ಜೀವಕ್ಕೆ ಅಪಾಯ ಉಂಟು ಮಾಡುವ ಕೆಲ ಔಷಧಿಗಳ ಮೇಲೆ ನಿಷೇಧ ಹೇರಿದೆ. ಚಿಕಿತ್ಸಕ ಗುಣದ ಕೊರತೆ ಇರುವ ಸ್ಥಿರ ಡೋಸ್‌ ಸಂಯೋಜನೆಯ ಕೆಲ ಔಷಧಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಒಂದೇ ಮಾತ್ರೆಯಲ್ಲಿ ಒಂದಕ್ಕಿಂತ ಹೆಚ್ಚು ಔಷಧಿಗಳಿರುತ್ತವೆ. ಇವುಗಳನ್ನು ಕಾಕ್‌ಟೇಲ್‌ ಮೆಡಿಸಿನ್‌ ಎಂದು ಕರೆಯಲಾಗುತ್ತದೆ. ಇಂಥಾ ಕೆಲವು ‍ಔಷಧಗಳಲ್ಲಿ ಚಿಕಿತ್ಸಕ ಗುಣ ಇರೋದಿಲ್ಲ. ಜೊತೆಗೆ ಅಪಾಯವನ್ನೂ ತಂದೊಡ್ಡಬಹುದು.

ಹೀಗಾಗಿ ಇವುಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವುದು ಅಗತ್ಯ ಎಂದು ತಜ್ಞರ ಸಮಿತಿ ಹಾಗೂ ಔಷಧ ತಾಂತ್ರಿಕ ಸಲಹಾ ಮಂಡಳಿಯ ಶಿಫಾರಸುಗಳನ್ನು ಆಧರಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಪರಿಷ್ಕೃತ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ಬಳಕೆಯಲ್ಲಿರುವ Rantac ಮತ್ತು Zinetac ಮಾತ್ರೆ ಸೇರಿದಂತೆ ಒಟ್ಟೂ 26 ಔಷಧಗಳ ಬಳಕೆ ನಿಷೇಧಿಸಿದೆ. rantac ಮತ್ತು zinetac ಔಷಧಿ ಸೇರಿದಂತೆ 26 ಔಷಧಿಗಳನ್ನು ನಿಷೇಧಿಸಲಾಗಿದೆ.

rantidine ಎಂಬ ಔಷಧಿಯನ್ನು Aciloc, Rantac, ಮತ್ತು zinetac ಎಂಬ ಬ್ರಾಂಡ್ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಔಷಧಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆ ಇದರ ಮೇಲೆ ನಿಷೇಧ ಹೇರಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ, ರಾಷ್ಟ್ರೀಯ ಅಗತ್ಯ ಔಷಧಗಳ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 384 ಔಷಧಗಳನ್ನು ಅಗತ್ಯ ಔಷಧಿ ಎಂದು ಪರಿಗಣಿಸಿದೆ. 26 ಔಷಧಿಗಳು ಈ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. 

 

ನಿಷೇಧಿತ ಔಷಧಗಳ ಪಟ್ಟಿ:

1. Alteplase

2. Atenolol

3. Bleaching Powder

4. Capreomycin

5. Cetrimide

6. Chlorpheniramine

7. Diloxanide furoate

8. Dimercaprol

9. Erythromycin

10. Ethinylestradiol

11. Ethinylestradiol(A) Norethisterone (B)

12. Ganciclovir

13. Kanamycin

14. Lamivudine (A) + Nevirapine (B) + Stavudine (C)

15. Leflunomide

16. Methyldopa

17. Nicotinamide

18. Pegylated interferon alfa 2a, Pegylated interferon alfa 2b

19. Pentamidine

20. Prilocaine (A) + Lignocaine (B)

21. Procarbazine

22. Ranitidine

23. Rifabutin

24. Stavudine (A) + Lamivudine (B)

25. Sucralfate

26. White petroleum jelly

ಜೀವಕ್ಕೆ ಅಪಾಯ ತರುವ ಔಷಧಿಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ನಿಷೇಧದಂತಹ ಕ್ರಮ ಕೈಗೊಂಡಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಎತ್ತಂಗಡಿ ಮಾಡಲಾಗಿದೆಯಂತೆ. ಇಂತಹದೊಂದು ಸುದ್ದಿ ವೇಗವಾಗಿ ಹರದಾಡುತ್ತಿದ್ದು, ವರ್ಗಾವಣೆ ಖಚಿತ ಎನ್ನಲಾಗಿದೆ.  ಪಾಲಿಕೆ ಆಯುಕ್ತರಾಗಿರುವ ಈಶ್ವರ

Live Cricket

error: Content is protected !!