ಬಸವರಾಜ ಬೊಮ್ಮಾಯಿ ಮೇಲೆ ಹಾವೇರಿಯ ಮಾಜಿ ಶಾಸಕ ನೆಹರು ಓಲೇಕಾರ ವಾಗ್ದಾಳಿ ನಡೆಸಿದ್ದಾರೆ. ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಪಕ್ಷ ಅಧೋಗತಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಓಲೇಕಾರ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹೊಂದಾಣಿಕೆ ರಾಜಕಾರಣ ಹಾಗೂ ಹಣ ಚೆಲ್ಲಿ ಆಯ್ಕೆಯಾಗಿದ್ದಾರೆ. ಅಂತಹವರಿಂದ ಪಕ್ಷ ಹೇಗೆ ಸಂಘಟನೆಯಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬೊಮ್ಮಾಯಿಯವರ ಅಹಂಕಾರದಿಂದ ಬಿಜೆಪಿಯ ಅಧೋಗತಿ ಹಾವೇರಿಯಿಂದಲೇ ಪ್ರಾರಂಭವಾಗಿದೆ ಎಂದು ನೆಹರು ಓಲೇಕಾರ ತಿಳಿಸಿದ್ದಾರೆ. ಕಾಂಗ್ರೇಸ್ ಪಕ್ಷದ ನಾಯಕರು ಸಂಪರ್ಕ ಮಾಡಿದ್ದು ನಿಜ ಎಂದ ನೆಹರು ಓಲೇಕಾರ, ಬಿಜೆಪಿ ನಾಯಕರು ಬೊಮ್ಮಾಯಿಯವರ ಮಾತು ಕೇಳಿ ನನ್ನನ್ನು ನಿರ್ಲಕ್ಷ ಮಾಡಿದ್ದಾರೆ ಎಂದು ಹೇಳಿದರು. ಸಧ್ಯ ಬಿಜೆಪಿಯಲ್ಲಿದ್ದೇನೆ ಎಂದ ಓಲೇಕಾರ, ಪಕ್ಷದ ಬಿಡುವ ಸುಳಿವು ನೀಡಿದ್ದಾರೆ.
