ರಾಜ್ಯದ ರಾಜಕಾರಣ ಮೈಕೊಡುವಿಕೊಂಡು ನಿಂತಿದೆ. ಕಾಂಗ್ರೇಸ್ ನಲ್ಲಿ ನಡೆದಿರುವ ಆಪರೇಷನ್ “ಎಕ್ಸ್ ” ಗೆ ಬಿಜೆಪಿ ಮುಖಂಡರ ನಿದ್ರೆ ಹಾರಿದೆ. ಒಬ್ಬೊರ ಮೇಲೊಬ್ಬರಂತೆ ಕಮಲ ತೊರೆದು ಕೈ ಹಿಡಿಯಲು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಬಿಜೆಪಿಯ ಮತ್ತೊಂದು ವಿಕೆಟ್ ಪತನಗೊಳಿಸಲು ಹಾಕಿದ್ದ ಗಾಳ, ಯಶಸ್ವಿಯಾಗಿದೆ ಎನ್ನಲಾಗಿದೆ. ಶಿವಾಜಿ ನಗರದ ಮಾಜಿ ಶಾಸಕ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಭೇಟಿ ಮಾಡಿ ಚರ್ಚಿಸಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ದು ಬಿಜೆಪಿಯ ಕಟ್ಟರ ಬೆಂಬಲಿಗರಾಗಿದ್ದು, ಕಾಂಗ್ರೇಸ್ ಸೇರಲಿದ್ದಾರೆಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ.
