ಸರ್ಕಾರಿ ಕಾಲೇಜಿನ ಪ್ರಾಂಶುಪಾಲ, ಕಾಲೇಜಿನಲ್ಲಿಯೇ ನೇಣಿಗೆ ಶರಣಾದ ಘಟನೆ ಬಾಗಲಕೋಟ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ. ನಾಗರಾಜ ಮುದಗಲ್ ಎಎಂಬುವವರು ಮೃತ ದುರ್ದೈವಿಯಾಗಿದ್ದಾರೆ.
ನಿನ್ನೇ ರಾತ್ರಿಯಿಡಿ ಕಾಲೇಜಿನಲ್ಲಿ “ಹೊನ್ನ ಸಂಭ್ರಮ” ಕಾರ್ಯಕ್ರಮದ ತಯಾರಿ ನಡೆಸಿ ನಾಗರಾಜ, ರಾತ್ರಿ 1 ಘಂಟೆಗೆ ಮನೆಗೆ ಬಂದಿದ್ದರಂತೆ. ಮತ್ತೆ ಇಂದು ಬೆಳಿಗ್ಗೆ 6-30 ರ ಸುಮಾರಿಗೆ ಕಾಲೇಜಿನಲ್ಲಿ ಕಾರ್ಯಕ್ರಮ ಇದೆ ಎಂದು ಹೇಳಿ ಕಾಲೇಜಿಗೆ ಹೋಗಿದ್ದರಂತೆ. ಬೆಳಿಗ್ಗೆ ಕಾಲೇಜಿಗೆ ಹೋಗಿದ್ದ ನಾಗರಾಜ ಮುದಗಲ್, ಮೆಟ್ಟಲುಗಳ ಕಬ್ಬಿಣದ ಸಳಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಕಾರ್ಯಕ್ರಮದ ಹಿನ್ನೇಲೆಯಲ್ಲಿ ನಿನ್ನೇ ರಾತ್ರಿ ಶಾಸಕರನ್ನು ಭೇಟಿ ಮಾಡಿ ಬಂದಿದ್ದರೆಂದು ಮೃತ ನಾಗರಾಜ ಅವರ ಹೆಂಡತಿ ವಿಜಯಲಕ್ಷ್ಮಿ ತಿಳಿಸಿದ್ದಾರೆ. ಇಂದು ಕಾಲೇಜಿನಲ್ಲಿ ನಡೆಯಬೇಕಿದ್ದ ಹೊನ್ನ ಸಂಭ್ರಮ ಕಾರ್ಯಕ್ರಮ ಸಾವಿಗೆ ಕಾರಣವಾಯಿತೆ ಅನ್ನೋ ಅನುಮಾನ ಮೂಡಿದೆ.ಸಾವಿನ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದೆ.
ಸಾವಿನ ಹಿಂದೆ ಸಂಶಯ ವ್ಯಕ್ತಪಡಿಸಿ, ವಿಜಯಲಕ್ಸ್ಮಿ ಪೊಲೀಸ್ ಠಾಣೆಗೆ ದೂರು ಕೊಟ್ಟ ಪ್ರತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.