ಕಳೆದೊಂದು ತಿಂಗಳಿನಿಂದ ಗುತ್ತಿಗೆದಾರರು ಮಾಡಿದ್ದ ಕಮಿಷನ್ ಆರೋಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮೇಲೆ ಈ ಆರೋಪ ಕೇಳಿ ಬಂದಿತ್ತು. ಡಿ ಕೆ ಕಮಿಷನ್ ಕೇಳಿಲ್ಲ ಅಂದ್ರೆ ನೊಣವಿನಕೆರೆ ಮಠದಲ್ಲಿ ಆಣೆ ಮಾಡಲಿ ಎಂದು ಗುತ್ತಿಗೆದಾರರೊಬ್ಬರು ಸವಾಲು ಹಾಕಿದ್ದರು. ನೊಣವಿನಕೆರೆಗೆ ಭೇಟಿ ನೀಡಿದ ಡಿ ಕೆ ಶಿವಕುಮಾರ, ಕಮಿಷನ್ ವಿಚಾರಕ್ಕೆ ಅಜ್ಜನ ಆಣೆ ಮಾಡಿದ್ದ ಗುತ್ತಿಗೆದಾರರು ಈಗೇಕೆ ಉಲ್ಟಾ ಹೊಡೆದಿದ್ದಾರೆ, ಯಾಕೆ ಹೊಡೆದಿದ್ದಾರೆ, ಇದೆಲ್ಲವೂ ನೊಣವಿನಕೆರೆ ಕ್ಷೇತ್ರದ ಮಹಿಮೆ ಎಂದು ಡಿ ಕೆ ಶಿವಕುಮಾರ ಹೇಳಿದರು. ನೊಣವಿನಕೆರೆ ಶ್ರೀ ಕ್ಷೇತ್ರಕ್ಕೆ ಬಂದಾಗಲೆಲ್ಲಾ ನನಗೆ ಎನರ್ಜಿ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
